ಕಾನೂನು ಸಚಿವ ಎಚ್.ಕೆ. ಪಾಟೀಲ ಆಶಯ; ವೇಮನರ ಸಾಹಿತ್ಯ, ಸಂಶೋಧನೆ ಕಾರ್ಯ ನಿರಂತರವಾಗಲಿ

19 Dwd 1
Published on

ಧಾರವಾಡ: ಮಹಾಯೋಗಿ ವೇಮನ ಸಾಹಿತ್ಯ, ಸಂಶೋಧನೆ ಕಾರ್ಯ ನಿರಂತರ ಆಗಬೇಕು. ವೇಮನ ಅಧ್ಯಯನ ಪೀಠದಿಂದ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಸ್ತಾವನೆ ಸಲ್ಲಿಸಿದರೆ, ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಮಹಾಯೋಗಿ ವೇಮನ ಪೀಠದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮÁತನಾಡಿದರು.
ವೇಮನರ ಸಂದೇಶಗಳನ್ನು ಜನಸಾಮÁನ್ಯರಿಗೆ ತಲುಪಿಸಲು ಮಹಾಯೋಗಿ ವೇಮನ ಪೀಠ ಕ್ರಿಯÁಶೀಲವಾಗಿ ಕಾರ್ಯ ನಿರ್ವಹಿಸಬೇಕು. ವೇಮನರ ಜೀವನ ತತ್ವ, ಸಂದೇಶಗಳು ಜನಸಾಮಾನ್ಯರಿಗೆ ತಲುಪಲು ಸರಳ ಭಾಷೆಯಲ್ಲಿ, ಸಣ್ಣ ಪುಸ್ತಕಗಳನ್ನಾಗಿ ರಚಿಸಿ ವಿತರಿಸಬೇಕು ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವೇಮನ ಪೀಠವು ಕವಿವಿಯ ಇತರ ಪೀಠಗಳಿಗೆ ಮÁದರಿಯÁಗಿದೆ. ಹಿರಿಯ ಲೇಖಕ ಎಸ್.ಆರ್. ಪಾಟೀಲರು ತೆಲುಗು ಭಾಷೆಯಲ್ಲಿರುವ ವೇಮನರ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದ್ದರಿAದ ಕನ್ನಡ ಸಾಹಿತ್ಯ ಮತ್ತು ವೇಮನರ ಚರಿತ್ರೆ ಇಂದು ಮನೆಮÁತಾಗಿದೆ ಎಂದರು.
ಎರೆಹೊಸಳ್ಳಿಯ ಮಹಾಯೋಗಿ ವೇಮನ ಸಂಸ್ಥಾನಮಠ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಮÁಜಿ ಶಾಸಕ ಡಿ.ಆರ್. ಪಾಟೀಲ, ಮÁಜಿ ಸಂಸದ ಪ್ರೊ. ಐ.ಜಿ. ಸನದಿ, ಕೆ.ಎಲ್. ಪಾಟೀಲ, ಪ್ರಕಾಶ ಕೋಳಿವಾಡ, ರಮೇಶ ಜಂಗಲ, ರಘುನಾಥ ಸಾಹುಕಾರ, ಜೆ.ಕೆ. ಜಮÁದಾರ, ಡಾ. ಗೋವಿಂದ ಮಣ್ಣೂರ, ರಘು ಲಕ್ಕಣ್ಣವರ, ಇತರರಿದ್ದರು.
ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು. ರಾಮದುರ್ಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿದ್ದಣ್ಣ ಲಂಗೋಟಿ ಮಹಾಯೋಗಿ ಶ್ರೀ ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮೌ¯್ಯಮÁಪನ ಕುಲಸಚಿವ ಡಾ. ಎನ್.ವೈ. ಮಟ್ಟಿಹಾಳ, ಸಿಂಡಿಕೇಟ್ ಮÁಜಿ ಸದಸ್ಯ ವಸಂತ ಲದ್ವಾ, ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೃ. ಅನ್ಬನ್, ಎ-ï.ಎಚ್. ಜಕ್ಕಪ್ಪನವರ, ಪ್ರತಾಪ ಚವ್ಹಾಣ, ವಸಂತ ಅರ್ಕಾಚಾರಿ, ಇತರರಿದ್ದರು.
ಕುಲಸಚಿವ ಎ. ಚನ್ನಪ್ಪ ಸ್ವಾಗತಿಸಿದರು. ಮಹಾಯೋಗಿ ವೇಮನ ಪೀಠದ ಸಂಯೋಜಕ ಡಾ. ಎಚ್.ಬಿ. ನೀಲಗುಂದ ಪ್ರಾಸ್ತಾವಿಕವಾಗಿ ಮÁತನಾಡಿದರು. ಉಮÁ ಅಂಕಲಗಿ ವೇಮನರ ಕುರಿತು ಭಕ್ತಿಗೀತೆ ಹಾಡಿದರು. ಪೀಠದ ಅಧ್ಯಾಪಕರು, ವಿದ್ಯಾರ್ಥಿಗಳು, ರಡ್ಡಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net