ವಿಜಯವಾಣಿ ಸುದ್ದಿಜಾಲ ಕೋಲಾರ
ಕಾನೂನು ಪದವಿಯನ್ನು ವಿಧ್ಯಾರ್ಥಿಗಳು ಆಸಕ್ತಿಯಾಗಿ ತೆಗೆದುಕೊಂಡು ಏಕಾಗ್ರತೆಯಿಂದ ಓದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ ಮಂಜುನಾಥ್ ವಿಧ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕಿನ ಅರಹಳ್ಳಿ ಬಳಿ ಇರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶ್ರೀಮತಿ ವೆಂಕಟಮ್ಮ ವಿ.ಕೊಂಡಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಸಭಾಂಗಣದ ವೇದಿಕೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಇದೇ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ವಿ.ಕೆ.ಪ್ರಶಾಂತ್ ಅವರು ತಾವು ಓದಿದ ಕಾಲೇಜಿಗೆ ಏನಾದರೂ ಕೊಡಗೆ ನೀಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ತಂದೆತಾಯಿ ಹೆಸರಲ್ಲಿ ಸಭಾಂಗಣಕ್ಕೆ ಗುಣಮಟ್ಟದ ವೇದಿಕೆ ಕಟ್ಟಿಸಿಕೊಟ್ಟಿದ್ದಾರೆ. ಕಟ್ಟಡಕ್ಕೆ ಬಣ್ಣ ಬಳಿದು ಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹಲವು ಸಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ನೀವು ಕೂಡ ಇದೇ ಕಟ್ಟಡದಲ್ಲಿ ಓದಿ ಬೆಳೆಯಬೇಕು. ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
ಕಾನೂನು ವಿಧ್ಯಾರ್ಥಿಗಳು ದಿನದ ೪ ರಿಂದ ೬ ಗಂಟೆ ಓದಲಿಕ್ಕೆ ತಮ್ಮ ಸಮಯ ಮೀಸಲಿಡಬೇಕು. ಕಾನೂನು ವಿಧ್ಯಾಭ್ಯಾಸ ಯಾವುದಕ್ಕೂ ತೊಡಕಗಾವುದಿಲ್ಲ. ಮುಂದೆ ಉನ್ನತ ವಿಧ್ಯಾಭ್ಯಾಸಕ್ಕೂ ಕಾನೂನು ವಿಧ್ಯಾಭ್ಯಾಸದಿಂದ ಸಹಾಯವಾಗಲಿದೆ ಎಂದು ಹೇಳಿದರು.
ನ್ಯಾಯಾಧೀಶರಾದ ಸುನೀಲ್ ಎಸ್ ಹೊಸಮುನಿ ಮಾತನಾಡಿ, ತಾವು ವಿಧ್ಯಾಭ್ಯಾಸ ಮಾಡಿದ ಶಾಲೆ ಕಾಲೇಜುಗಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ವಿ.ಕೆ.ಪ್ರಶಾಂತ್ ಅವರು ಅಲುಮಿನಿ ಆಧ್ಯಕ್ಷರಾಗಿ ಕಾಲೇಜಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ತಮ್ಮ ಕಾರ್ಯ ಮುಂದುವರೆಸಲಿ ಎಂದರು.
ಕಾಲೇಜಿನ ಅಲುಮಿನಿ ಸಂಘದ ಅಧ್ಯಕ್ಷ ಹಾಗೂ ಶ್ರೀಮತಿ ವೆಂಕಟಮ್ಮ ವಿ.ಕೊಂಡಪ್ಪ ಚಾರಿಟಬಲ್ ಸಂಸ್ಥಾಪಕ ಅಧ್ಯಕ್ಷ ಹಿರಿಯ ವಕೀಲರಾದ ಪ್ರಶಾಂತ್ ವಿ.ಕೆ ಮಾತನಾಡಿ, ಕಾಲೇಜಿನಲ್ಲಿ ಸಭಾಂಗಣ ಇದ್ದರೂ ವೇದಿಕೆ ಇರಲಿಲ್ಲ, ಇದರಿಂದಾಗಿ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಚುಟುವಟಿಕೆಗಳು ನಡೆಸಲು ಕಷ್ಟವಾಗುತ್ತಿತ್ತು, ಇದನ್ನು ಅರಿತು ನಮ್ಮ ಟ್ರಸ್ಟ್ ವತಿಯಿಂದ ಸುಸಜ್ಜಿತವಾದ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾನೂನು ವಿಧ್ಯಾರ್ಥಿಗಳು ಉತ್ತಮ ವಿಧ್ಯಾಭ್ಯಾಸ ಮಾಡಿ ಕಾಲೇಜಿಗೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಆರ್.ಪದ್ಮಲತಾ, ಡಾ.ಚಿದಾನಂದಸ್ವಾಮಿ, ಡಾ. ರಂಗನಾಥಯ್ಯ, ಅಲುಮಿನಿ ಸಂಘದ ಉಪಾಧ್ಯಕ್ಷ ಜಾಕೀರ್ ಹುಸೇನ್, ಖಜಾಂಚಿ ಕೆ.ಎಂ ಚೌಡೇಗೌಡ, ಕಾನೂನು ಕಾಲೇಜ್ ಪ್ರಾಂಶುಪಾಲ ಡಾ.ಎನ್.ಎಸ್.ಅಂಬೇಡ್ಕರ್, ಕಾಲೇಜ್ ಅಧೀಕ್ಷಕ ಬಾಲಕೃಷ್ಣ, ಲಲಿತಾ ಬಾಯಿ, ಪದ್ಮ ಮತ್ತು ಕಾಲೇಜಿನ ಆಡಳಿತ ಸಿಬ್ಬಂದಿ, ಶಿಕ್ಷಕ ವೃಂದ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿತ್ರ ೧೦ ಕೆ.ಎಲ್.ಆರ್. ೦೩ : ಅರಹಳ್ಳಿ ಬಳಿ ಇರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಭಾಂಗಣ ವೇದಿಕೆಯನ್ನು ಉದ್ಘಾಟಿಸಿದ ಹಿರಿಯ ಸತ್ರ ನ್ಯಾಯಾಧೀಶರಾದ ಜಿ.ಎ ಮಂಜುನಾಥ್, ನ್ಯಾಯಾಧೀಶರಾದ ಸುನೀಲ್ ಎಸ್ ಹೊಸಮುನಿ ಮುಂತಾದವರಿದ್ದರು.