ಕಾಡು ಮಳೆ ಚಲನಚಿತ್ರ 31ರಂದು ಬಿಡುಗಡೆ

film
Published on

ಸಂಪೂರ್ಣ ಕಾಡಿನಲ್ಲಿಯೇ ನಿರ್ಮಾಣಗೊಂಡ ‘ಕಾಡು ಮಳೆ’ ಚಲನಚಿತ್ರ ಜ.31ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ ಎಂದು ನಾಯಕ ನಟ ಅರ್ಥ ತಿಳಿಸಿದರು.

ಇದೊಂದು ವಿಭಿನ್ನ ಕಥೆಯ ಸಿನಿಮಾ. ಸಮಯವೇ ಇಲ್ಲದಿರುವ ಜಾಗ ಹೇಗಿರುತ್ತದೆ ಎಂಬಿತ್ಯಾದಿ ಹೊಸ ವಿಷಯ ಆಧರಿಸಿದೆ. ಸಂಪೂರ್ಣ ಕಾಡಿನಲ್ಲಿಯೇ ಚಿತ್ರೀಕರಣಗೊಂಡಿರುವ ವೇಳೆಯೇ ವಿಶಿಷ್ಟ ರೀತಿಯ ಧ್ವನಿ ಹಾಗೂ ಬೆಳಕನ್ನು ಬಳಸಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭ್ರಮೆ ಮತ್ತು ವಾಸ್ತವಗಳ ನಡುವಿನ ಗೊಂದಲಕ್ಕೆ ಸಿಲುಕಿ ಜೀವನ ನಡೆಸುವವರು ಹಲವರಿದ್ದಾರೆ. ಇದೇ ವೇಳೆ ಪ್ರಕೃತಿಯಲ್ಲಿನ ಅನೇಕ ನಿಗೂಢಗಳಿಗೆ ಇನ್ನೂ ಉತ್ತರ ಕಂಡುಕೊಳ್ಳಲಾಗಿಲ್ಲ ಎಂಬ ಎಳೆಯನ್ನು ಆಧರಿಸಿ, 4 ವರ್ಷಗಳ ಪ್ರಯತ್ನದ ಫಲವಾಗಿ ಸಿನಿಮಾ ರೂಪಿಸಲಾಗಿದೆ ಎಂದು ವಿವರಿಸಿದರು. ನಿರ್ಮಾಪಕಿ ಶ್ರೀನಿ, ರಘು, ಡಾ.ಎಚ್.ಸಿ.ಸಣ್ಣಸ್ವಾಮಿಗೌಡ, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net