ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು

24bhr 1 elephant
ಅನಿತಾ
Published on

ಬಾಳೆಹೊನ್ನೂರು: ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವಿಗೀಡಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮೂಲದ ಅನಿತಾ (25) ಮೃತ ಕೂಲಿ ಕಾರ್ಮಿಕ ಮಹಿಳೆ. ಬನ್ನೂರು ಗ್ರಾಮದ ಶಶಿಶೇಖರ್ ಎಂಬುವರ ತೋಟಕ್ಕೆ ಕೂಲಿ ಕೆಲಸ ಅರಸಿ ತನ್ನ ಪತಿಯೊಂದಿಗೆ ಬುಧವಾರ ರಾತ್ರಿ ಬೇರೊಂದು ತೋಟದಿಂದ ಆಟೋದಲ್ಲಿ ಬಂದಿದ್ದಾರೆ.

ಆಟೋದಲ್ಲಿದ್ದ ಲಗೇಜನ್ನು ಇಳಿಸಿದ್ದಾರೆ. ಒಂದು ಬ್ಯಾಗನ್ನು ಕೂಲಿ ಲೈನ್‌ನ ಮನೆಯೊಳಗೆ ಇಟ್ಟು, ಇನ್ನೊಂದು ಬ್ಯಾಗನ್ನು ಮನೆಯೊಳಗೆ ತರಲು ಹೊರಹೋಗಿದ್ದಾರೆ. ಈ ವೇಳೆ ತೋಟದ ಬದಿಯಲ್ಲಿ ನಿಂತಿದ್ದ ಕಾಡಾನೆ ದಾಳಿ ಮಾಡಿದೆ.

ತೀವ್ರ ಅಸ್ವಸ್ಥವಾಗಿದ್ದ ಮಹಿಳೆಯನ್ನು ಕೂಡಲೇ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ಮಾರ್ಗಮಧ್ಯೆೆ ಮೃತಪಟ್ಟಿದ್ದಾರೆ. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net