

ಸಾಗರ: ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರ ಮನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ತಿಳಿದಿದೆ. ಸುಮಾರು 12 ಸಾವಿರ ಎಕರೆ ಈ ಯೋಜನೆಯಲ್ಲಿ ನೀರಿನಲ್ಲಿ ಮುಳುಗಿದ್ದು ಈ ಬಗ್ಗೆ ಎಲ್ಲ ವಿವರಗಳು ಸರ್ಕಾರದಲ್ಲಿದ್ದು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದರು.
ಜಾತಿ ಗಣತಿಯ ಕುರಿತಂತೆ ಉಡುಪಿಯ ಪೇಜಾವರ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ. ರಾಜ್ಯದ ತೆರಿಗೆದಾರರ 160 ಕೋಟಿ ರೂ. ಹಣ ಬಳಸಿ ಜಾತಿ ಗಣತಿ ಮಾಡಲಾಗಿದೆ. ಇದನ್ನು ನಾವು ಜನತೆ ಎದುರು ಬಿಡುಗಡೆ ಮಾಡಲೇಬೇಕು. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಹೋರಾಟದ ಮೂಲಕ ರಾಜಕಾರಣಿಯಾಗಿ ಮೂಡಿ ಬಂದವರು. ಇಂದಿಗೂ ಜನಪರ ಕೆಲಸ ಮಾಡುತ್ತಿದ್ದಾರೆ ಎಂದರು. ಶಾಸಕ ಗೋಪಾಲಕೃಷ್ಣ ಬೇಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುರೇಶ್ ಬಾಬು, ಲಲಿತಮ್ಮ, ಪ್ರಭಾವತಿ ಚಂದ್ರಕಾಂತ್, ಗಣಪತಿ ಮಂಡಗಡಲೆ, ವಿ.ಶಂಕರ್, ಡಿ.ದಿನೇಶ್, ಶ್ರೀನಿವಾಸ್ ಇತರರಿದ್ದರು.