

ಸಾಲಿಗ್ರಾಮ: ಕಾಂಗ್ರೆಸ್‌ನ ಗ್ಯಾರಂಟಿಗಳು ಶೀಘ್ರ ಕಾರ್ಯರೂಪಕ್ಕೆ ಬರಲಿದ್ದು, ಜನರಿಗೆ ಶುಭ ಸುದ್ದಿ ಸಿಗಲಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಗ್ರಾಮದ ಮುಸ್ಲಿಂ ಮುಖಂಡರಿಂದ ಬುಧವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದರು.
ತಾಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿನ ತುರ್ತು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ಸಾಲಿಗ್ರಾಮ ತಾಲೂಕಿಗೆ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿಸಿಕೊಡುವಂತೆ ಶಾಸಕ ರವಿಶಂಕರ್ ಅವರಿಗೆ ಮುಸ್ಲಿಂ ಮುಖಂಡ ಮುಕ್ತಾರ್ ಪಾಷಾ ಮನವಿ ಮಾಡಿದರು
ಸ್ಥಳೀಯ ಮುಖಂಡರಾದ ವಾಸೀಂ ಪಾಷಾ, ನಾಸಿರ್‌ಪಾಷಾ, ಅಸ್ಮಿತ್‌ಪಿರು, ಮುಬಾರಕ್, ಎರೆಮನುಗನಹಳ್ಳಿ ಅಸ್ಲಾಂ ಇತರರಿದ್ದರು.