ಕಸಾಪ, ಸಿರಿಗನ್ನಡ ಪುಸ್ತಕ ಮಳಿಗೆ ನೂತನ ಕಚೇರಿ ಹಸ್ತಾಂತರ

Published on

ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಿರಿಗನ್ನಡ ಪುಸ್ತಕ ಮಳಿಗೆ ನೂತನ ಕಟ್ಟಡವನ್ನು ಶುಕ್ರವಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಉದ್ಘಾಟಿಸಿ ಹಸ್ತಾಂತರಿಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ ಪಕ್ಕದ ರಥದ ಬೀದಿಯಲ್ಲಿರುವ ಸರ್ಕಾರಕ್ಕೆ ಸೇರಿದ ಕಚೇರಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಿರಿಗನ್ನಡ ಪುಸ್ತಕ ಮಳಿಗೆಗೆ ಬಿಟ್ಟುಕೊಡಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು. ಬಳಿಕ ಕಸಾಪದಿಂದ ಅವರನ್ನು ಸನ್ಮಾನಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸಿ.ಎಲ್ ಆನಂದ್, ತಹಸೀಲ್ದಾರ್ ಚಿದಾನಂದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎಸ್ ವಿನಯ್, ಜನಪದ ಅಕಾಡೆಮಿಯ ಸದಸ್ಯ ಸಿ.ಎಂ. ನರಸಿಂಹಮೂರ್ತಿ, ಸಿರಿಗನ್ನಡ ಪುಸ್ತಕ ಮಳಿಗೆ ಗೋವಿಂದು, ಸಾಹಿತಿ ಕೆ.ವೆಂಕಟರಾಜು, ಕಸಾಪ ಕಾರ್ಯದರ್ಶಿಗಳಾದ ಜಿ.ರಾಜಪ್ಪ, ಬಂಗಾರಗಿರಿ ನಾಯಕ, ಕೋಶಾಧ್ಯಕ್ಷ ಎಸ್. ನಿರಂಜನ್ ಕುಮಾರ್, ಬಸವಣ್ಣ, ಸಿಎಂ ಶಿವಕುಮಾರ್, ಬಿ ಬಸವರಾಜು, ಮಂಜು, ವೆಂಕಟರಮಣಸ್ವಾಮಿ ಪಾಪು, ಮಾದಾಪುರ ರವಿಕುಮಾರ್, ಕಿರಣ್ ರಾಜ್, ಸಿಎಸ್ ಮಂಜುಳಾ, ಶಾ ಮುರಳಿ, ಚಾರಂ ಶ್ರೀನಿವಾಸಗೌಡ, ಪುರುಷೋತ್ತಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net