ಕಸಾಪ ಸಾಹಿತ್ಯ ಕೃಷಿ ನಿರಂತರವಾಗಿರಲಿ - ಸಿದ್ದಬಸವ ದೇವರು

01
Published on

ಉಳ್ಳಾಗಡ್ಡಿ-ಖಾನಾಪುರ: ಕನ್ನಡ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸುವಲ್ಲಿ ವಂಟಮೂರಿಯ ಬಸವಪ್ರಭು ಲಖಮಗೌಡ ಸರದೇಸಾಯಿ ಅವರ ಪಾತ್ರ ಪ್ರಮುಖ ಎಂದು ಸಿದ್ದಬಸವ ದೇವರು ಹೇಳಿದರು.

ಸಮೀಪದ ಹುಣಸಿಕೊಳ್ಳಮಠದಲ್ಲಿ 110ನೇಯ ಕಸಾಪ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗುರುಚಾರ ಹಮ್ಮಿಕೊಂಡಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶ್ರೀಮಠದಲ್ಲಿ ಕನ್ನಡ ಸಾಹಿತ್ಯಕ್ಕೆ ಪೂರಕವಾಗುವ ವಿಷಯಗಳನ್ನು ಪ್ರಚುರ ಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಕೃಷಿ ಮಾಡೋಣ ಎಂದರು.

ಪ್ರೊ.ಎಲ್.ವಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡಿಗೆ ಕನ್ನಡವೇ ಗತಿ. ಭಾಷೆ ನೆಲ-ಜಲದ ಸಂರಕ್ಷಣೆಗಾಗಿ ಕಸಾಪ ಶತಮಾನದಿಂದ ಸೇವೆ ಸಲ್ಲಿಸುತ್ತ ಬಂದಿದೆ ಎಂದರು.

ಪ್ರಕಾಶ ಅವಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಳು ಹಾಗೂ ಪತ್ರಕರ್ತರನ್ನು ಸತ್ಕರಿಸಲಾಯಿತು. ಅನುರಾಧಾ ಕಾಪಸಿ, ಪದಾಧಿಕಾರಿಗಳಾದ ಕಿರಣ ನೇಸರಿ, ಎಂ.ನಂಜುಂಡಪ್ಪ, ಬಿ.ಬಿ.ಅಕ್ಕತಂಗೇರಹಾಳ, ಶಿವಾನಂದ ಗುಂಡಾಳಿ, ಡಾ.ಡಿ.ಬಿ.ಗವಾನಿ, ಡಾ.ವಿಜಯಲಕ್ಷ್ಮೀ ಮಿರ್ಜೆ, ರೂಪಾ ಕಡಗಾವಿ, ಶಿವಾನಂದ ಮಠಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net