ಕಸದ ಡಬ್ಬಿ ಇಡುವಂತೆ ಪಿಡಿಒಗೆ ಮನವಿ

IMG-20220914-WA0135
ಹನಗೋಡು ಗ್ರಾಮ ಪರಿಮಿತಿಯ ಪ್ರಮುಖ ಬೀದಿಗಳಲ್ಲಿ ಕಸ ಸಂಗ್ರಹ ತೊಟ್ಟಿಗಳನ್ನಿಡಬೇಕೆಂದು ಒತ್ತಾಯಿಸಿನ ಹನಗೋಡು ವಿನಾಯಕ ಗೆಳೆಯರ ಬಳಗ ಪಿಡಿಒ ಪ್ರಶಾಂತ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ದರ್ಶನ್ , ಸುನೀಲ್ , ರಾಜೇಶ್ , ಬೀರೇಶ್ ಇದ್ದರು.
Published on

ನಗೋಡು: ಗ್ರಾಮ ಪರಿಮಿತಿಯ ಪ್ರಮುಖ ಬೀದಿಗಳಲ್ಲಿ ಕಸ ಸಂಗ್ರಹ ತೊಟ್ಟಿಗಳನ್ನಿಡಬೇಕೆಂದು ಆಗ್ರಹಿಸಿ ಹನಗೋಡು ವಿನಾಯಕ ಗೆಳೆಯರ ಬಳಗದಿಂದ ಪಿಡಿಒ ಪ್ರಶಾಂತ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


ಹನಗೋಡು ಗ್ರಾಮದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ, 2500 ಮತದಾರರಿರುವ ದೊಡ್ಡ ಗ್ರಾಮವಾಗಿದೆ. ಹೋಬಳಿ ಕೇಂದ್ರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ಪ್ರಮುಖ ವ್ಯಾಪಾರ ವಹಿವಾಟಿನ ಸ್ಥಳವಾಗಿರುವುದರಿಂದ ಇಲ್ಲಿಗೆ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ತ್ಯಾಜ್ಯದ ಸಮಸ್ಯೆ ಎದುರಾಗಿದ್ದು, ಗ್ರಾಮಸ್ಥರು ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗ್ರಾಮದ ಪ್ರಮುಖ ಸ್ಥಳ ಹಾಗೂ ಬೀದಿಗಳಲ್ಲಿ ಕಸ ಸಂಗ್ರಹ ತೊಟ್ಟಿಗಳನ್ನಿಡಬೇಕೆಂದು ಮನವಿ ಸಲ್ಲಿಸಲಾಯಿತು.

ಈ ವೇಳೆ ಬಳಗದ ದರ್ಶನ್, ಸುನೀಲ್ , ಕುಮಾರ್ , ರಾಜೇಶ್ , ಬೀರೇಶ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net