ಕಸದ ಡಬ್ಬಿ ಇಟ್ಟು ನಿಯಮ ಉಲ್ಲಂಘಿಸಿದ ಪಾಲಿಕೆ

Published on

ಹುಬ್ಬಳ್ಳಿ: ರಸ್ತೆಗಳ ಪಕ್ಕ ಕಸದ ಡಬ್ಬಿಗಳನ್ನು ಇಡಬಾರದೆಂಬ ನಿಯಮ ಇದ್ದರೂ ಹುಬ್ಬಳ್ಳಿ ಯಲ್ಲಿ ಈ ನಿಯಮ ಬಹಿರಂಗವಾಗಿಯೇ ಉಲ್ಲಂಘನೆ ಆಗುತ್ತಿದೆ. ಗೋಪನಕೊಪ್ಪ ಮುಖ್ಯ ರಸ್ತೆಯ ಪಕ್ಕದಲ್ಲಿ ಕಸದ ಡಬ್ಬಿ ಇಡಲಾಗಿದೆ. ಡಬ್ಬಿ ತುಂಬಿ ಕಸ ಎಲ್ಲ ಸುತ್ತಲೂ ಹರಡಿದೆ. ಹುಬ್ಬಳ್ಳಿ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಎಂಬಂತಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಈ ಕಸದ ಡಬ್ಬಿ ಕಾಣದೇ ಇರುವುದು ಅಚ್ಚರಿಯ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net