ಕಷ್ಟಪಟ್ಟು ಜಾಲಪ್ಪ ಸಂಸ್ಥೆ ಬೆಳೆಸಿದ್ದೇವೆ: ಟ್ರಸ್ಟ್ ಅಧ್ಯಕ್ಷ ಜಿ.ಎಚ್.ನಾಗರಾಜ್ ಹೇಳಿಕೆ ಉತ್ತಮ ಆಡಳಿತಗಾರ ಬಂದ್ರೆ ಸಂತೋಷ

25-klr-001 jalappa hosp
Published on

ಕೋಲಾರ: ಶ್ರೀ ದೇವರಾಜ ಅರಸು ಎಜುಕೇಷನ್ ಟ್ರಸ್ಟ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಉತ್ತಮ ಸವಾಜ ನಿರ್ವಾಣದ ಗುರಿಹೊಂದಿ ಸಂಸ್ಥೆಗಳನ್ನು ಕಟ್ಟಲಾಗಿದೆ. ಆದರೆ ಇದನ್ನು ಸಹಿಸದ ಕೆಲವರು ಟ್ರಸ್ಟ್ ಸ್ಥಾಪಕ ದಿ.ಆರ್.ಎಲ್.ಜಾಲಪ್ಪ ಅವರ ಕುಟುಂಬಸ್ಥರನ್ನು ಎತ್ತಿಕಟ್ಟಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಜಿ.ಎಚ್.ನಾಗರಾಜ್ ತಿಳಿಸಿದರು.

ನಗರದ ಹೊರವಲಯದ ಶ್ರೀ ದೇವರಾಜ ಅರಸು ವೈದ್ಯಕೀಯ ವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಸೋಮವಾರ ಜಾಲಪ್ಪ ಕುಟುಂಬದವರು ಆಸ್ಪತ್ರೆ ಬಳಿ ಬಂದು ನಡೆದುಕೊಂಡ ರೀತಿ ಸರಿಯಲ್ಲ. ಇದು ಆಸ್ಪತ್ರೆಯಲ್ಲಿನ ಸಾವಿರಾರು ರೋಗಿಗಳು, ವೈದ್ಯಕೀಯ ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಸಿಬ್ಬಂದಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರ ಹಿಂದೆ ಆಡಳಿತ ಪಕ್ಷದವರ ಕೈವಾಡ ಇರುವುದನ್ನು ಅಲ್ಲಗಳೆಯಲಾಗದು ಎಂದರು.

ಇದು ದೇಗುಲದಂತಹ ಸಂಸ್ಥೆ. ಇಲ್ಲಿ ನೂರಾರು ಬಡ ರೋಗಿಗಳು ಗುಣಮುಖರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಸಂಸ್ಥೆಗೆ ಕೆಟ್ಟ ಹೆಸರು ತರುವ ಕೆಲಸ ಯಾರೂ ವಾಡುವುದು ಬೇಡ ಎಂದು ಮನವಿ ಮಾಡಿದರು.

ಏನೇ ಬದಲಾವಣೆಗಳಾಗಬೇಕಾದರೂ ಬೈಲಾ ಪ್ರಕಾರವೇ ನಡೆಯಬೇಕು. ಜಾಲಪ್ಪ ಬರೆದಿಟ್ಟಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ಪತ್ರದಲ್ಲಿ ಮುಂದಿನ ಟ್ರಸ್ಟಿಗಳು ಯಾರ‌್ಯಾರು ಇರಬೇಕು ಎಂಬುದು ಸ್ಪಷ್ಟವಾಗಿತ್ತು. ಅದರಂತೆಯೇ ಜ.18ರಂದು ಎಲ್ಲ ಟ್ರಸ್ಟಿಗಳ ಸಮ್ಮುಖ ನನ್ನನ್ನು ಅಧ್ಯಕ್ಷನನ್ನಾಗಿ ವಾಡಲಾಗಿದೆ. ಭವಿಷ್ಯದಲ್ಲಿ ಒಳ್ಳೆಯ ಆಡಳಿತಗಾರ ಬಂದರೆ ಸಂತೋಷದಿಂದ ಮುಂದುವರಿಸುತ್ತೇವೆ. ಟ್ರಸ್ಟ್ ಸಭೆ ಎಲ್ಲಿ ಬೇಕಾದರೂ ವಾಡಬಹುದು. ಹಾಗಾಗಿ ಎಲ್ಲರ ಸಹಮತ ಪಡೆದು ಬೆಂಗಳೂರಿನಲ್ಲಿ ವಾಡಿದ್ದೆವು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಸ್ಥಾಪಿತ ಟ್ರಸ್ಟಿ: ಕುಟುಂಬ ಸದಸ್ಯರನ್ನು ಟ್ರಸ್ಟ್‌ಗೆ ತೆಗೆದುಕೊಳ್ಳುವ ಬಗ್ಗೆ ಬೈಲಾದಲ್ಲಿದೆ. 2000ರಲ್ಲಿ ಜಾಲಪ್ಪ ಅವರು ಪುತ್ರ ನರಸಿಂಹಸ್ವಾಮಿಗೆ ಅವಕಾಶ ನೀಡಿದ್ದರು. ಆದರೆ ಅವರು ತಂದೆಯ ವಿರುದ್ಧವಾಗಿಯೇ ನಡೆದುಕೊಂಡರೆಂದು ಟ್ರಸ್ಟ್‌ನಿಂದ ಕೈಬಿಡಲಾಯಿತು. ವಾಜಿ ಸಿಎಂ ಸಿದ್ದರಾಮಯ್ಯ ಸ್ಥಾಪಿತ ಟ್ರಸ್ಟಿ ಆಗಿದ್ದು, ಅವರ ಮನೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಚರ್ಚೆಯಾಗಿತು ಎಂದರು. ಟ್ರಸ್ಟ್ ಕಾರ್ಯದರ್ಶಿ ಹನುಮಂತರಾಜು, ಕುಲಪತಿ ರಾಜೇಶ್ ಜಗದಾಳೆ, ಟ್ರಸ್ಟಿಗಳಾದ ಮಣಾಲಿನಿ, ಪ್ರಕಾಶ್, ಹರೀಶ್ ಚಂದ್ರ, ವಿನಯ್ ಶಾಮ, ಕಾನೂನು ಸಲಹೆಗಾರ ಎಂ.ಟಿ.ನಾಣಯ್ಯ ಇತರರು ಇದ್ದರು.

2004ರಲ್ಲಿ ಟ್ರಸ್ಟ್‌ಗೆ ಸೇರ್ಪಡೆಯಾದೆ. ನಮ್ಮ ತಂದೆಯವರ ಆಸೆಯಂತೆಯೇ ಉಪಾಧ್ಯಕ್ಷನಾಗಿರುವೆ. ಇದು ಕುಟುಂಬ ಅಥವಾ ಜಾತಿ ಟ್ರಸ್ಟ್ ಅಲ್ಲ. ಅವರ ಆಶಯದಂತೆ ಸಂಸ್ಥೆಯನ್ನು ಮುನ್ನಡೆಸುತ್ತೇವೆ. ಜೆ.ರಾಜೇಂದ್ರ, ಟ್ರಸ್ಟ್ ಉಪಾಧ್ಯಕ್ಷ

ವಿವಾದ ಮತ್ತೊಂದು ದಿಕ್ಕಿನತ್ತ: ಕೋಲಾರದ ಪ್ರತಿಷ್ಠಿತ ಮೆಡಿಕಲ್ ಕಾಲೇಜು, ಆಸ್ಪತ್ರೆ, ದೊಡ್ಡಬಳ್ಳಾಪುರದ ಹಲವು ಶಿಕ್ಷಣ ಸಂಸ್ಥೆಗಳನ್ನೊಳಗೊಂಡ ದೇವರಾಜ ಅರಸು ಎಜುಕೇಷನ್ ಟ್ರಸ್ಟ್ ಈಗ ವಿವಾದದ ಕೇಂದ್ರವಾಗಿದೆ. ಸೋಮವಾರ ಜಾಲಪ್ಪ ಪುತ್ರ, ಪುತ್ರಿಯರು, ಮೊಮ್ಮಕ್ಕಳು ಟ್ರಸ್ಟ್ ವಿರುದ್ಧ ಧ್ವನಿ ಎತ್ತಿದ್ದರೆ, ಮಂಗಳವಾರ ಟ್ರಸ್ಟ್ ಅಧ್ಯಕ್ಷ ಜಿ.ಎಚ್.ನಾಗರಾಜ್ ಎಲ್ಲ ಜಾಲಪ್ಪ ಅವರ ಆಶಯದಂತೆಯೇ ನಡೆಯುತ್ತಿದೆ. ನಿಯಮ ಮೀರಿ ಯಾವುದೂ ನಡೆದಿಲ್ಲ. ರಾಜಕೀಯ ಬೆರೆತು ಹೀಗಾಗಿದೆ ಎಂದಿದ್ದು, ವಿವಾದ ಮತ್ತೊಂದು ದಿಕ್ಕಿನತ್ತ ಹೊರಳಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net