ಕಳ್ಳಬಟ್ಟಿ ನಿರ್ಮೂಲನೆಗೆ ಕ್ರಮ ತೆಗೆದುಕೊಳ್ಳಿ

bkt-5-2
ಬಾಗಲಕೋಟೆ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಗುರುವಾರ ಕಳ್ಳಬಟ್ಟಿ ನಿರ್ಮೂಲನೆ ಕುರಿತು ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಮಾತನಾಡಿದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಳ್ಳಬಟ್ಟಿ ಸಾರಾಯಿ ಸಂಪೂರ್ಣ ನಿರ್ಮೂಲನೆ ಕ್ರಮಕೈಗೊಳ್ಳುವಂತೆ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಅಽಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಗುರುವಾರ ಕಳ್ಳಬಟ್ಟಿ ನಿರ್ಮೂಲನೆ ಕುರಿತು ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಚಖಂಡಿ ತಾಂಡಾ-೧ ಹಾಗೂ ಅಮೀನಗಡ ತಾಂಡಾದಲ್ಲಿ ಮಾತ್ರ ಕಳ್ಳಬಟ್ಟಿ ಕೇಂದ್ರಗಳು ಮಾತ್ರ ಇರುತ್ತವೆ. ಈ ಭಾಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಂಡು ಕಳ್ಳಬಟ್ಟಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಬೇರೆ ಉದ್ಯೋಗ ಕೈಗೊಂಡು ಜೀವನ ನಡೆಸುವಂತಾಗಬೇಕು ಎಂದರು.

ಇ0ತಹ ಚಟುವಟಿಕೆಗಳಲ್ಲಿ ತೊಡಗಿರುವ ಫಲಾನುಭವಿಗಳನ್ನು ಗುರುತಿಸಿ ಬೇರೆ ಉದ್ಯೋಗ ಕೈಗೊಳ್ಳಲು ಅಗತ್ಯ ತರಬೇತಿ ನೀಡುವ ಕೆಲಸವಾಗಬೇಕು. ಅಲ್ಲದೇ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಅವರಿಗೆ ದೊರಕುವಂತೆ ಮಾಡಬೇಕು. ಅಂದಾಗ ಮಾತ್ರ ಅವರ ಆರ್ಥಿಕ ಮಟ್ಟ ಉತ್ತಮವಾಗಿರಿಸಲು ಸಾಧ್ಯವಾಗುತ್ತದೆ. ಹಂತ ಹಂತವಾಗಿ ಕಳ್ಳಬಟ್ಟಿ ಸರಾಯಿ ಸಂಪೂರ್ಣವಾಗಿ ನಿರ್ಮೂಲನೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕು. ಕುಡಿತ ಕಡಿಮೆ ಆದರೆ ಮಾತ್ರ ಕಾನೂನು ಸುವ್ಯವಸ್ಥೆ ಚೆನ್ನಾಗಿರಲು ಸಾಧ್ಯವಾಗುತ್ತದೆ. ಕಳ್ಳಬಟ್ಟಿ ಕೇಂದ್ರ ಹೊಂದಿರುವ ಮುಚಖಂಡಿ ಹಾಗೂ ಅಮೀನಗಡ ಪಟ್ಟಣದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಅಬಕಾರಿ, ಪೊಲೀಸ್, ಅರಣ್ಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲು ತಿಳಿಸಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಅಬಕಾರಿ ಉಪ ಆಯುಕ್ತ ಹನಮಂತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಜುಲೈ-೨೦೨೪ ರಿಂದ ಇಲ್ಲಿಯವರೆಗೆ ೧೯೦೩ ದಾಳಿಗಳನ್ನು ನಡೆಸಲಾಗಿದ್ದು, ೪೯೫ ಪ್ರಕರಣಗಳನ್ನು ದಾಖಲಿಸಿ ೪೯೫ ಆರೋಪಿಗಳನ್ನು ಬಂಽಸಲಾಗಿದೆ. ೯೮೬೮ ಲೀಟರ ಮದ್ಯ, ೧೮ ಲೀ ಹೊರ ರಾಜ್ಯದ ಮದ್ಯ, ೪ ಲೀಟರ್ ಬೀಯರ್, ೩೯ ಲೀ ಸೇಂದಿ, ೪೬೭ ಲೀ ಕಳ್ಳಬಟ್ಟಿ ಸಾರಾಯಿ, ೫೮೫ ಲೀಟರ ಬೆಲ್ಲದ ಕೊಳೆ ಹಾಗೂ ೧ ಅಟೋ, ೧ ಕಾರು, ೨೧ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಗಲಕೋಟೆ ಶಹರದಲ್ಲಿ ಬೆಲ್ಲ ಮಾರಾಟ ಮಾಡುತ್ತಿರುವ ಮಾಹಿತಿಯನ್ನು ಕಲೆ ಹಾಕುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಕುAಬಾರಿಕೆ ನಡೆಸುತ್ತಿರುವ ವ್ಯಕ್ತಿಗಳಿಗೆ ಖುದ್ದಾಗಿ ಸಂಪರ್ಕಿಸಿ ಗಡಿಗೆಯ ಮೇಲೆ ಮುಚ್ಚುವ ಮುಚ್ಚಳವನ್ನು ಅಕ್ರಮ ಕಳ್ಳಬಟ್ಟಿ ಸರಾಯಿ ತಯಾರಿಸುವಂತಹ ಸಲಕರಣೆಗಳನ್ನು ಉಪಯೋಗಿಸುತ್ತಿದ್ದು, ಇಂತಹ ಸಲಕರಣೆ ತಯಾರಿಸದಂತೆ ನೋಟಿಸ್ ನೀಡಲಾಗಿದೆ. ತಹಸೀಲ್ದಾರ ಅಧ್ಯಕ್ಷತೆಯಲ್ಲಿ ರಚಿಸಿದ ಸ್ಥಾಯಿ ಸಮಿತಿ ಸಭೆಗಳನ್ನು ಜರುಗಿಸಿ ಕಳ್ಳಬಟ್ಟಿ ಸಂಪೂರ್ಣ ನಿರ್ಮೂಲನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಚಟುವಟಿಕೆಯಲ್ಲಿರುವ ಹಾಗೂ ವೀಚಕ್ಷಣೆಯಲ್ಲಿರುವ ಕಳ್ಳಬಟ್ಟಿ ಕೇಂದ್ರಗಳ ಮೇಲೆ ಸಾಮೂಹಿಕವಾಗಿ ಅಬಕಾರಿ ದಾಳಿಗಳನ್ನು ಕೈಗೊಳ್ಳಲು ತಂಡಗಳನ್ನು ರಚಿಸಲಾಗಿದೆ. ರಜಾ ದಿನಗಳಲ್ಲಿಯೂ ಅಽಕಾರಿ ಹಾಗೂ ಸಿಬ್ಬಂದಿಗಳು ಗಸ್ತು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಅಬಕಾರಿ ಉಪ ಅಽÃಕ್ಷಕ ಅನೀಲಕುಮಾರ ನಂದೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಮಂಜುನಾಥ ಡಿ, ಪ್ರಾದೇಶಿಕ ಸಾರಿಗೆ ಅಽಕಾರಿ ಆರ್.ಎಲ್.ಹೊಸಮನಿ ಸೇರಿದಂತೆ ಆಯಾ ತಾಲೂಕಿನ ಅಬಕಾರಿ ಅಽಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net