ಕಳಪೆ ಕಾಮಗಾರಿಗೆ ಆಸ್ಪದ ನೀಡದಿರಿ

bylkuppe (1)
ಚೌಡಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ ನೆರವೇರಿಸಿದರು. ಚಂದ್ರ ಮೌಳಿ, ಗಿರೀಶ್, ಸುರೇಶ್ ಇದ್ದರು
Published on


ಶಾಸಕ ಕೆ.ಮಹದೇವ್ ಎಚ್ಚರಿಕೆ


ಬೈಲಕುಪ್ಪೆ: ಗರಾಸಿ ಕಾಲನಿಯಿಂದ ಚೌಡಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಕೆ.ಮಹದೇವ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.


ಕಳಪೆ ಕಾಮಗಾರಿಗೆ ಆಸ್ಪದ ಕೊಡಬಾರದು. ಅಂದಾಜು ಪ್ರಕಾರವೇ ಕಾಮಗಾರಿ ಮಾಡಬೇಕು. ಉಳಿದ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಿಸೋಣ ಎಂದು ಮಹದೇವ್ ತಿಳಿಸಿದರು.


ಪ್ಲಾಸ್ಟಿಕ್ ಕಸಬುದಾರರ ಸಂಘದ ಅಧ್ಯಕ್ಷ ಮಲ್ಲೇಶ್ ಮತ್ತು ಪದಾಧಿಕಾರಿಗಳ ಒತ್ತಾಯದ ಮೇರೆಗೆ ಶಾಸಕ ಕೆ.ಮಹದೇವ್, ತಹಸೀಲ್ದಾರ್ ಚಂದ್ರಮೌಳಿ ಗರಾಸಿ ಕಾಲನಿಗೆ ಭೇಟಿ ನೀಡಿದರು.


ಗರಾಸಿ ಕಾಲನಿ ಪ್ಲಾಸ್ಟಿಕ್ ಕಸಬುದಾರರ ಸಂಘದ ಅಧ್ಯಕ್ಷ ಮಲ್ಲೇಶ್ ಮತ್ತು ಪದಾಧಿಕಾರಿಗಳ ಒತ್ತಾಯದ ಮೇರೆಗೆ ಶಾಸಕ ಕೆ.ಮಹದೇವ್ ಮತ್ತು ತಹಸಿಲ್ದಾರ್ ಚಂದ್ರಮೌಳಿ ಕಾಲನಿಗೆ ಭೇಟಿ ನೀಡಿದರು.


ಸರ್ಕಾರದ ವತಿಯಿಂದ ನೀಡಲಾದ ಸೈಟ್ ಮತ್ತು ಮನೆಗಳು ಅದಲು-ಬದಲಾಗಿವೆ. ಅವುಗಳನ್ನು ಸರಿಪಡಿಸುವಂತೆ ಮತ್ತು ಸಂಘಕ್ಕೆ ನೀಡಲಾದ ಸೈಟ್ ಅನ್ನು ಸರ್ವೇ ಮಾಡಿ ಜಾಗ ಗುರುತು ಪಡಿಸಿ ಎಂದು ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಕೃಷ್ಣಕುಮಾರ್ ಅವರಿಗೆ ಮನವಿ ಕೊಟ್ಟು ಒಂದು ವರ್ಷ ತುಂಬಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಮಲ್ಲೇಶ್ ಎಚ್ಚರಿಕೆ ನೀಡಿದರು.


ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾವು ಏನೂ ಮಾಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಒಂದೊಂದಾಗಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಇಂಜಿನಿಯರ್ ಮಲ್ಲಿಕಾರ್ಜುನ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ರಾಮಚಂದ್ರ, ಕೆ.ಕೆ.ನಾರಾಯಣ, ರಾಜಪ್ಪ, ಸಭಾ, ಸುನಿ, ಮುಖಂಡರಾದ ಗಿರೀಶ್, ಶಫಿವುಲ್ಲಾ ಖಾನ್, ಆರ್‌ಐ ಪ್ರದೀಪ್, ಗ್ರಾಮ ಲೆಕ್ಕಾಧಿಕಾರಿ ನವೀನ್‌ರಾವ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net