ಕಲ್ಲಿಗೆ ಜೀವ ನೀಡುವ ಕಲಾವಿದನಿಗೆ `ಶಿಲ್ಪಶ್ರೀ'..!

bkt-2-4
ಬಾಗಲಕೋಟೆ ನಗರದ ಮಾಯಾಚಾರ್ಯ ಶಿಲ್ಪ ಕಲಾ ಕೇಂದ್ರದಲ್ಲಿ ವಿರೇಶ ಮಾಯಾಚಾರ್ಯ ಮೂರ್ತಿ ಕೆತ್ತನೆಯಲ್ಲಿ ತೊಡಗಿರುವುದು.
Published on

ಸಂತೋಷ ಕೃ. ದೇಶಪಾಂಡೆ
ಬಾಗಲಕೋಟೆ: ಕೇವಲ ಮನುಷ್ಯರಿಗೆ ಮಾತ್ರ ಜೀವವಿಲ್ಲ. ಕಲ್ಲೊಳಗ ಐತಿರೀ. ಒಂದೊಂದು ಉಳಿಪೆಟ್ಟು ಕೊಟ್ಟಾಗಲು ಅದರ ಆಂತರ್ಯದ ಮರ್ಮ ನನ್ನೊಳಗ ತರಂಗ ಹುಟ್ಟಸ್ತಾವ ರೀ. ಮಷಿನ್ನಿಂದ್ ಮಾಡುದಾರಗ್ಗಿಂತ ಕೈಯಿಂದ ಮಾಡುವ ಶಿಲ್ಪ ಕೃಷಿ ಕಾಯಕನಾ ಬ್ಯಾರೆ. ಅದರೊಳಗಿರುವ ನೆಮ್ಮದಿ, ಸಂತೋಷ ಬೇರೆಯಲ್ಲೂ ಸಿಗದು..!!!
ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯಿಂದ ನೀಡುವ ಶಿಲ್ಪಶ್ರೀ ಪ್ರಶಸ್ತಿಗೆ ಭಾಜನರಾದ ಬಾಗಲಕೋಟೆ ನಗರದ ವಿರೇಶ ಮಾಯಾಚಾರ್ಯ ಅವರ ಮನದಾಳದ ಮಾತಿದು. ಧಾರ್ಮಿಕ, ಸಾಮಾಜಿಕ ಸಂಬಂಧಪಟ್ಟ ಯಾವುದೇ ಗಣ್ಯರು, ದೇವರು ಮೂರ್ತಿ ಇರಲಿ ಅದನ್ನು ಯಥಾವತ್ತಾಗಿ ಕಲ್ಲಿನಲ್ಲಿ ಕೆತ್ತನೆ ಮಾಡಿ ಕಣ್ಣೆ ರಾಚುವಂತೆ ಮಾಡುತ್ತಾರೆ ಕಲಾವಿದ ವಿರೇಶ. ಅವರ ಕೈಯಲ್ಲಿ ಮೂಡಿ ಬಂದ ಮೂರ್ತಿಗಳಿಗೆ ಭಾವ, ಭಕ್ತಿ ಮೇಳೈಸುತ್ತದೆ.
ಕಲೆಗೆ ತಂದೆನೇ ಗುರು..:

ವಿರೇಶ ಮಾಯಾಚಾರ್ಯ ೨೦-೪-೧೯೭೧ ರಲ್ಲಿ ಜನಿಸಿದರು. ತಂದೆ ಗುಂಡಪ್ಪ, ತಾಯಿ ಕಾಳಮ್ಮ. ತಂದೆ ಗುಂಡಪ್ಪ ಶಿಲ್ಪ ಕಲೆಯನ್ನೆ ಬದುಕಾಗಿಸಿಕೊಂಡಿದ್ದರು. ಚಿಕ್ಕವರಿದ್ದಾಗನಿಂದಲು ತಂದೆಯ ಕಲೆಯನ್ನೆ ನೋಡುತ್ತಾ ಬೆಳೆದ ವಿರೇಶ ಅವರು ಬಸವೇಶ್ವರ ಶಾಲೆಯಲ್ಲಿ ಪ್ರಾರ್ಥಮಿಕ, ಪೌಢ ಶಿಕ್ಷಣ ಪಡೆದುಕೊಂಡರು. ನಂತರ ದಾವನಗೆರೆಯಲ್ಲಿ ಸ್ಕೋಲ್ ಆಫ್ ಆರ್ಟ್ಸ್ ೫ ವರ್ಷ ಡಿಪ್ಲೋಮಾ ಪದವಿ ಪಡೆದುಕೊಂಡರು. ಕಳೆದ ಮೂರು ದಶಕಗಳಿಂದ ಶಿಲ್ಪ ಕಲೆಯ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಕರಿ ಕಲ್ಲು, ಸಂಗಮೂರಿ, ಕಂಚು ಸೇರಿದಂತೆ ವಿವಿಧ ವಸ್ತುಗಳಿಂದ ಅದ್ಭುತ್‌ವಾದ ಮೂರ್ತಿ ತಯಾರು ಮಾಡುವಲ್ಲಿ ಪರಿಣಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net