ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

28 LDH 2 jatre
ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆಯಿತು.
Published on

ಲಿಂಗದಹಳ್ಳಿ: ಚಂದ್ರದ್ರೋಣ ಪರ್ವತದ ತಪ್ಪಲಿನ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು. ಲಿಂಗದಹಳ್ಳಿ, ನಂದಿಬಟ್ಟಲು, ಕಲ್ಲತ್ತಿಪುರ, ಉಡೇವಾ ಸೇರಿದಂತೆ ರಾಜ್ಯದ ವಿವಿಧೆೆಡೆಯಿಂದ ಆಗಮಿಸಿದ್ದ ಭಕ್ತರು ಶ್ರೀ ಸ್ವಾಮಿಯ ರಥವನ್ನು ಎಳೆದರು. ಭಕ್ತರು ದೇವರ ರಥದ ಕಳಸಕ್ಕೆ ಕಾಳುಮೆಣಸು, ದವಸ ಧಾನ್ಯ, ಬಾಳೆ ಹಣ್ಣು ಮುಂತಾದ ದ್ರವ್ಯಗಳನ್ನು ಎಸೆಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು. ಕ್ಷೇತ್ರದ ಆದಿದೇವತೆಯಾದ ಶ್ರೀ ಕಟ್ಟಿನ ಚೌಡೇಶ್ವರಿ ದೇವಿ, ಗಂಗೂರು ಶ್ರೀ ಚೌಡೇಶ್ವರಿ ಅಮ್ಮ ದರ್ಶನ ಪಡೆದು ಭಕ್ತರು ಪುನೀತರಾದರು. ರಥೋತ್ಸವದಲ್ಲಿ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ, ಶ್ರೀ ಕಟ್ಟಿನ ಚೌಡೇಶ್ವರಿ ದೇವಾಲಯದ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ, ಎನ್.ಎಸ್.ನಾಗರಾಜ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net