ಕಲ್ಗುಡಿ, ಬಿ.ಎಂ. ಹೆಗ್ಡೆಗೆ ಪುಸ್ತಕ ಪ್ರಾಧಿಕಾರ ಪ್ರಶಸ್ತಿ

Published on

ಹಿರಿಯ ಸಾಹಿತಿ ಡಾ. ಬಸವರಾಜ ಕಲ್ಗುಡಿ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಆಯ್ಕೆ ಮಾಡಿದೆ.

2019ನೇ ಸಾಲಿನ ಪ್ರಶಸ್ತಿಗಳನ್ನು ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಪ್ರಕಟಿಸಿದ್ದಾರೆ.
ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಈ ವರ್ಷ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಸಿಂಧಗಿಯ ಎಂ.ಎನ್. ಪಡಶೆಟ್ಟಿ ಹಾಗೂ ಬೆಂಗಳೂರಿನ ಕೆ. ರಾಜಕುಮಾರ್ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ.ಬಿ.ಎಂ. ಹೆಗ್ಡೆ ಅವರಿಗೆ ನೀಡಲಾಗಿದೆ.

ಐಬಿಎಚ್ ಪ್ರಕಾಶನಕ್ಕೆ ಉತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕಲಬುರ್ಗಿ ಪ್ರಶಸ್ತಿಯು 75 ಸಾವಿರ ರೂ. ಹಾಗೂ ಪ್ರಕಾಶನ ಪ್ರಶಸ್ತಿಯು 1 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿರಲಿದೆ. ರಾಜರತ್ನಂ ಪ್ರಶಸ್ತಿ 50 ಸಾವಿರ ರೂ. ಹಾಗೂ ಅನುಪಮಾ ನಿರಂಜನ ಪ್ರಶಸ್ತಿ 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ಪ್ರಾಧಿಕಾರದ ಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.

ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು
ಮೊದಲ ಬಹುಮಾನ: ಬೆಂಗಳೂರಿನ ಸಪ್ನ ಬುಕ್ ಹೌಸ್ ಪ್ರಕಟಿಸಿದ ಡಾ. ಸಿ. ಚಂದ್ರಪ್ಪ ಅವರ ಡಾ. ಬಿ.ಆರ್. ಅಂಬೇಡ್ಕರ್ ಮಹಾಮಾನವ ಮಹಾಯಾನ(25 ಸಾವಿರ ರೂ.)
ದ್ವಿತೀಯ ಬಹುಮಾನ: ತುಮಕೂರಿನ ನಮ್ಮ ಪ್ರಕಾಶನ ಹೊರತಂದ ಕೃಷ್ಣಮೂರ್ತಿ ಬಿಳಿಗೆರೆ ಅವರ ಭೂಮಿಯೊಂದ ಮಹಾಬೀಜ(20 ಸಾವಿರ ರೂ.)
ತೃತೀಯ ಬಹುಮಾನ: ಮೈಸೂರಿನ ಅಭಿರುಚಿ ಪ್ರಕಾಶನ ಹೊರತಂದ ಚಿನ್ನಸ್ವಾಮಿ ವಡ್ಡಗೆರೆ ಅವರ ಬಂಗಾರದ ಮನುಷ್ಯರು ಭಾಗ-1(10 ಸಾವಿರ ರೂ.)
ಮಕ್ಕಳ ಪುಸ್ತಕ ಸೊಗಸು ಬಹುಮಾನ: ಹಾಸನದ ಚೈತ್ರೋದಯ ಪ್ರಕಾಶನದ ಸುಶೀಲಾ ಸೋಮಶೇಖರ್ ಅವರ ಅರಳುವ ಹೂಗಳು(8 ಸಾವಿರ ರೂ.)
ಮುಖಪುಟ ಚಿತ್ರ ವಿನ್ಯಾಸ: ಕಲಾವಿದ ಕಿರಣ್ ಮಾಡಾಲು(ಎಸ್ ದಿವಾಕರ್ ಅವರ ಸೋತ ಕಣ್ಣುಗಳನ್ನು ಮಿಟುಕಿಸುವ ಮದ್ಯಾಹ್ನ)-10 ಸಾವಿರ ರೂ.
ಮುಖಪುಟ ಚಿತ್ರ ಕಲೆ: ಕಲಾವಿದ ಪುಂಡಲೀಕ ಕಲ್ಲಿಗನೂರು(ಬಿ.ಆರ್. ಪೊಲೀಸ್ ಪಾಟೀಲ ಅವರ ಮಹಾವೃಕ್ಷ)-8 ಸಾವಿರ ರೂ.
ಪುಸ್ತಕ ಮುದ್ರಣ ಸೊಗಸು: ಮಂಗಳೂರಿನ ಆಕೃತಿ ಪ್ರಿಂಟ್ಸ್(ಗಣೇಶ ಅಮೀನಗಢ ಸಂಪಾದಿತ ವನ್ಯವರ್ಣ)-5 ಸಾವಿರ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net