

ಎನ್.ಆರ್.ಪುರ: ಕಲಿಕಾ ಹಬ್ಬವು ಶಿಕ್ಷಣ ಇಲಾಖೆಯ ಮಹತ್ವಪೂರ್ಣ ಕಾರ್ಯಕ್ರಮವಾಗಿದೆ ಎಂದು ಗಡಿಗೇಶ್ವರ ಕ್ಲಸ್ಟರ್‌ನ ಸಿಆರ್‌ಪಿ ಮಂಜುಶ್ರೀ ತಿಳಿಸಿದರು.
ಜೋಗಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗಡಿಗೇಶ್ವರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕಲಿಕಾ ಹಬ್ಬವನ್ನು 1 ರಿಂದ 5
ನೇ ತರಗತಿಯ ಮಕ್ಕಳಿಗೆ ಕ್ರಿಯಾತ್ಮಕ, ರಚನಾತ್ಮಕ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಕಲಿಕಾ ಹಬ್ಬವು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನವನ್ನು ಅಭಿವೃದ್ಧಿ ಪಡಿಸುವ
ಕಲಿಕಾ ಉತ್ಸವವಾಗಬೇಕು ಎಂದರು. ಜೋಗಿಮಕ್ಕಿ ಎಸ್‌ಡಿಎಂಸಿ ಅಧ್ಯಕ್ಷ ಜೆ.ಆರ್.ಜಗದೀಶ್ ಮಾತನಾಡಿ, ಕಲಿಕಾ ಹಬ್ಬವು ಪ್ರತಿಭಾ ಕಾರಂಜಿಯಂತೆ ಮಕ್ಕಳ ಸುಪ್ತ ಪ್ರತಿಭೆಯನ್ನು
ಹೊರತೆಗೆಯುವ ಕಾರ್ಯಕ್ರಮವಾಗಿದೆ. ಮಕ್ಕಳ ಜ್ಞಾಪಕ ಶಕ್ತಿ ಪರೀಕ್ಷೆ, ಕತೆ ಹೇಳುವಂತಹ ಸ್ಪರ್ಧೆ ನಡೆಸುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಾಗಲಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಪರಿಷತ್ ಸದಸ್ಯ ಸುಭಾಷ್ ಮಾತನಾಡಿ, ಕಲಿಕಾ ಹಬ್ಬವು ಸೃಜನಾತ್ಮಕವಾಗಿ ಆಯೋಜನೆಗೊಂಡಿದ್ದು ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು.
ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಗಡಿಗೇಶ್ವರ ಕ್ಲಸ್ಟರ್ ವ್ಯಾಪ್ತಿಯ 9 ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಜೋಗಿಮಕ್ಕಿ ಶಾಲೆ ಮುಖ್ಯಶಿಕ್ಷಕ ಎಸ್.ಜಿ.ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಂಜಪ್ಪ, ಕರ್ಕೇಶ್ವರ ಕ್ಲಸ್ಟರ್ ಸಿಆರ್‌ಪಿ ರಾಮನಾಯಕ್, ಸರ್ಕಾರಿ ನೌಕರರ ಸಂಘದ
ಖಜಾಂಚಿ ಪ್ರಕಾಶ್, ನಿರ್ದೇಶಕ ನಾಗೇಶ್, ಶಿಕ್ಷಕರಾದ ಪ್ರಕಾಶ್, ಅನ್ನಪೂರ್ಣಾ, ನವಮಣಿ, ಪ್ರೇಮ್‌ಕುಮಾರ್, ರಂಗಪ್ಪ, ಪ್ರದೀಪ್, ರವೀಶ್ ಇದ್ದರು.