

ಸಿರಿಗೇರಿ: ಕಲಾವಿದರನ್ನು ಬೆಳೆಸುವುದು ಗೌರವದ ಕೆಲಸ ಎಂದು ನಶಿಸಿ ಹೋಗುತ್ತಿರುವ ತಳ ಸಮುದಾಯದ ಜಿಲ್ಲಾ ಸಂಚಾಲಕ ತೆಕ್ಕಲಕೋಟೆ ಅಂಬಣ್ಣ ಅಭಿಪ್ರಾಯಪಟ್ಟರು.
ಬಳ್ಳಾರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಆಯೋಜಿಸಿದ್ದ ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳ 20 ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಶಿಬಿರದಲ್ಲಿ ಕೇವಲ 10 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. 20 ಕಲಾವಿದರನ್ನು ಆಯ್ಕೆ ಮಾಡುವ ವಿಚಾರವನ್ನು ಡಿಸಿ ಜತೆಗೆ ಮಾತನಾಡಿ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಕಲಾವಿದರಿಗಾಗಿ ಶ್ರಮಪಡುತ್ತಿರುವ ಎಚ್.ತಿಪ್ಪೇಸ್ವಾಮಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮ ತೆಕ್ಕಲಕೋಟೆಯಲ್ಲಿ ನಡೆಯಬೇಕಾಗಿತ್ತು. ಸಿರಿಗೇರಿಯಲ್ಲಿ ನಡೆಸುವಂತೆ ತಿಪ್ಪೇಸ್ವಾಮಿ ವಿನಂತಿಸಿಕೊಂಡಿದ್ದರಿಂದ ಇಲ್ಲೇ ಆಯೋಜಿಸಲಾಗಿದೆ ಎಂದರು.
ಹಾಪ್‌ಕಾಮ್ಸ್‌ನ ಜಿಲ್ಲಾ ಉಪಾಧ್ಯಕ್ಷ ಹಾಗಲೂರು ಮಲ್ಲನಗೌಡ ಮಾತನಾಡಿ ನಾಟಕ, ಬಯಲಾಟಗಳನ್ನು ಈ ಗ್ರಾಮದಲ್ಲಿ ಹೆಚ್ಚು ಹೆಚ್ಚು ಪ್ರದರ್ಶನ ಮಾಡುತ್ತಿರುವುದು ಸಂತಸದ ಸಂಗತಿ ಎಂದರು. ಪ್ರಮುಖರಾದ ಲಕ್ಷ್ಮಣ ಭಂಡಾರಿ ಮಾತನಾಡಿ, ಕಾರ್ಯಕ್ರಮಗಳಿಗೆ ಸಹಕಾರ, ಪ್ರೋತ್ಸಾಹ ಸದಾ ಇರುತ್ತದೆ ಎಂದರು. ಭಜಂತ್ರಿ ರಮೇಶ್ ಮಾತನಾಡಿ, ನಮ್ಮೂರು ಜಾತ್ರೆ, ವಿಶೇಷ ಕಾರ್ಯಕ್ರಮಗಳಲ್ಲಿ ಪೌರಾಣಿಕ ನಾಟಕಗಳು ಪ್ರದರ್ಶನಗಳ್ಳಲಿ. ನಮ್ಮೂರಿನ ಸುತ್ತಲಿನ ಕಲಾವಿದರನ್ನು ಬಳಸಿಕೊಳ್ಳಲಿ ಎಂದರು.
ಪ್ರಾ.ಕೃ.ಪ. ಅಧ್ಯಕ್ಷ ಉಮಾಪತಿ, ಗ್ರಾಮದ ಮುಖಂಡರಾದ ಕುಮಾರ್ ಸ್ವಾಮಿ, ಓರ‌್ವಾಯಿ ಹೊನ್ನೂರಪ್ಪ, ಸಿ.ಎಂ.ಸಿದ್ದರಾಮಯ್ಯ ಸ್ವಾಮಿ, ನೆನಕ್ಕಿ ದೊಡ್ಡಬಸಪ್ಪ, ದಾಸಾಪುರದ ತಿಮ್ಮಯ್ಯ, ಪತ್ರಕರ್ತ ಶಿವರಾಮ್, ವಕೀಲ ರಾಮ್‌ಬಾಬು, ಕಲಾವಿದರಾದ ಎಚ್.ತಿಪ್ಪೇಸ್ವಾಮಿ, ಮಣಿಕಂಠ, ಖಾಜಾಪೀರ್ ಇತರರು ಇದ್ದರು.