

ಬೆಂಗಳೂರು: ಬಿಸಿಲಿನ ಝಳ ಹೆಚ್ಚಿರುವ ಹಿನ್ನೆಲೆ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8ಕ್ಕೆ ಆರಂಭವಾಗುವ ಕಲಾಪವು ಮಧ್ಯಾಹ್ನ 1.30ಕ್ಕೆ ಮುಗಿಯಲಿದೆ. ಇದೇ ನಿಯಮವನ್ನು ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಎಂಟು ಜಿಲ್ಲಾ ನ್ಯಾಯಾಂಗಕ್ಕೂ ವಿಸ್ತರಿಸಲಾಗಿದೆ.
ಏ. 3ರಿಂದ ಸಮಯ ಬದಲಾವಣೆ ಜಾರಿಗೆ ಬಂದಿದ್ದು, ಮೇ 31ರವರೆಗೂ ಮುಂದುವರಿಯಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅವರು ತಿಳಿಸಿದ್ದಾರೆ.
ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಹಾಗೂ ಬೆಳಗಾವಿ ವಿಭಾಗದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ನ್ಯಾಯಾಂಗ ಮತ್ತು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಕಲಾಪಗಳು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, 11ರವರೆಗೆ ನಡೆಯಲಿದೆ. ಅರ್ಧ ತಾಸು ವಿರಾಮವಿರಲಿದ್ದು, ಆ ನಂತರ 11.30ರಿಂದ 1.30ರವರೆಗೆ ಕಲಾಪ ನಡೆಯಲಿದೆ.
ಕಚೇರಿಯು ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಲಿದೆ. ಶನಿವಾರ ಇದಕ್ಕೆ ವಿನಾಯಿತಿ ಇರಲಿದೆ. ಶನಿವಾರ ಬೆಳಗ್ಗೆ 7.30ರಿಂದ 11.30ರವರೆಗೆ ಕಚೇರಿ ಕಾರ್ಯನಿರ್ವಹಿಸಲಿದೆ.