ಕಲಬುರಗಿ ಹಿಂದು ಗಣಪತಿ ವಿಸರ್ಜನೆ 27ರಂದು

ganesh
Published on

ಕಲಬುರಗಿ: ನಗರದ ಕೋಟೆ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆ ಶುಕ್ರವಾರ ಅದ್ದೂರಿ ಶೋಭಾಯಾತ್ರೆಯಲ್ಲಿ ಜರುಗಲಿದೆ ಎಂದು ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ ತಿಳಿಸಿದರು.
ಶುಕ್ರವಾರ ಬೆಳಗ್ಗೆ ವಿವಿಧ ಪೂಜ್ಯರು, ಸಂತರ ನೇತೃತ್ವದಲ್ಲಿ ಬೆಳಗ್ಗೆ ೧೦ ಗಂಟೆಗೆ ವಿಶೇಷ ಪೂಜೆ ನಂತರ ಐತಿಹಾಸಿಕ ಕೋಟೆಯಿಂದ ಪ್ರಾರಂಭವಾಗುವ ಶೋಭಾಯಾತ್ರೆ ಏಷಿಯನ್ ಪ್ರಕಾಶ್ ಮಾಲ್​, ಲೋಹಾರ ಗಲ್ಲಿ, ಹುಮನಾಬಾದ್ ಬೇಸ್ ಕಿರಾಣಿ ಬಜಾರ್, ಚೌಕ್ ಪೊಲೀಸ್ ಠಾಣೆ, ಆದರ್ಶ ಮೆಡಿಕಲ್, ಜಗತ್ ವೃತ್ತದ ಮೂಲಕ ಸಂಜೆ ೬.೩೦ರ ವೇಳೆಗೆ ಅಪ್ಪನ ಕೆರೆಗೆ ತಲುಪಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶೋಭಾಯಾತ್ರೆಯಲ್ಲಿ ದೇಸಿ ವಾದ್ಯಗಳ ಜತೆಗೆ ಕರಾವಳಿಯ ಚಂಡೆ ವಾದ್ಯ, ಡಿಜೆ ಇರಲಿದೆ. ನಮ್ಮ ಭಾಗದ ಪ್ರಸಿದ್ಧ ಹಲಗೆ, ಡೊಳ್ಳು ಕುಣಿತ, ಚಿಟ್ಟ ಹಲಗಿ, ಲಂಬಾಣಿ ನೃತ್ಯ ಯಾತ್ರೆಗೆ ಮೆರಗು ನೀಡಲಿದೆ. ದಾರಿಯುದ್ದಕ್ಕೂ ಮನೆ ಹಾಗೂ ವ್ಯಾಪಾರಿಗಳು ಗಣೇಶನ ಭವ್ಯ ಸ್ವಾಗತಕ್ಕೆ ಅಲಂಕಾರ ಮಾಡಲಿದ್ದಾರೆ. ಯಾತ್ರೆ ಮಾರ್ಗದಲ್ಲಿ ಮೂರು ಸ್ಥಳದಲ್ಲಿ ಸುಮಾರು ೨೦ ಸಾವಿರ ಜನರಿಗೆ ಪ್ರಸಾದ, ನೀರಿನ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆಗೂ ಮುನ್ನ ಹಿಂದು ಮಹಾಗಣಪತಿಯ ಅಲಂಕಾರಿಕ ವಸ್ತಾçಭರಣಗಳ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದರು. ಶೋಭಾಯಾತ್ರೆಯಲ್ಲಿ ಸುಮಾರು ೧೫ರಿಂದ ೨೦ ಸಾವಿರ ಗಣೇಶನ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಸುರೇಶ ಟೆಂಗಳಿ, ಸಿದ್ದರಾಜ ಬಿರಾದಾರ, ಶಿವರಾಜ ಪಾಟೀಲ್, ಡಾ.ಶರಣರಾಜ, ರಾಜು ಎಂಆರ್‌ಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net