ಕರ್ನಾಟಕದಲ್ಲಿ ಸ್ಥಾಪಿಸಿರುವ ನ್ಯಾಷನಲ್ ಲಾ ಕಾಲೇಜಿನಲ್ಲಿ ಕನ್ನಡಿಗರಿಗೆ ವಂಚನೆ / ಎಂ.ಎಲ್.ಅನಿಲ್‌ಕುಮಾರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜ್ಯ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆದು ಕರ್ನಾಟಕದಲ್ಲಿ ಸ್ಥಾಪಿಸಿರುವ ನ್ಯಾಷನಲ್ ಲಾ ಕಾಲೇಜಿನಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆ ಮತ್ತು ಧೋರಣೆ ಕುರಿತು ಗುರುವಾರ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರನ್ನು ಎಂ.ಎಲ್.ಅನಿಲ್ ಕುಮಾರ್ ಪ್ರಶ್ನಿಸಿದರು.

೧೯೮೮ ರಲ್ಲಿ ಅಂದಿನ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನ್ಯಾಷನಲ್ ಲಾ ಸ್ಕೂಲ್ ಸ್ಥಾಪನೆ ಮಾಡಲು ರಾಜ್ಯ ಸರ್ಕಾರದದಿಂದಲೇ ಭೂಮಿಯನ್ನು ಮಂಜೂರು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಿ ಸ್ಥಾಪಿಸಿರುತ್ತಾರೆ. ಅದರಂತೆ ಸಿದ್ದರಾಮಯ್ಯರವರು ಮುಖ್ಯಮಂತ್ರಿಗಳಿದ್ದಾಗ ಕನ್ನಡಿಗರಿಗೆ ಶೇ.೨೫ ರಷ್ಟು ಮೀಸಲಾತಿ ನೀಡಬೇಕೆಂದು ಕಾಯ್ದೆ ರೂಪಿಸಿರುತ್ತಾರೆ. ಆದರೆ ನ್ಯಾಷನಲ್ ಲಾ ಸ್ಕೂಲ್ ಮತ್ತು ಕಾಲೇಜಿನ ಆಡಳಿತ ಮಂಡಳಿಯು ನ್ಯಾಯಾಲಯದಲ್ಲಿ ದಾವೇ ಸಲ್ಲಿಸಿ ಈ ಕಾಯ್ದೆಯನ್ನು ರದ್ದು ಪಡಿಸುತ್ತಾರೆ.

ತದನಂತರ ಸುಪ್ರೀಂ ಕೋರ್ಟಿನಲ್ಲಿ ಶೇ. ೨೫ ರಷ್ಟು ಮೀಸಲಾತಿ ನೀಡುವಂತೆ ಸೂಚಿಸಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಸ್ಥಾಪಿಸಿರುವ ನ್ಯಾಷನಲ್ ಲಾ ಸ್ಕೂಲ್ ಮತ್ತು ಕಾಲೇಜಿನ ವರು ಶೇ. ೨೫ ರಷ್ಟು ಮೀಸಲಾತಿಯನ್ನು ನೀಡುತ್ತಿಲ್ಲ. ಬೇರೆ ರಾಜ್ಯದಲ್ಲಿ ನೀಡಲಾಗುತ್ತಿದೆ. ಆಲ್ ಇಂಡಿಯಾ ರಾಂಕಿAಗ್ ಜನರಲ್ ಮೆರಿಟ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ೨೫ ರಷ್ಟು ಮೀಸಲಾತಿ ಅಡಿಯಲ್ಲಿ ತಂದು ನಮ್ಮ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದಾರೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಕಲ್ಪಿಸುವಲ್ಲಿ ಅವಕಾಶ ನೀಡಬೇಕೆಂದು ವಿವರಿಸಿದರು.

ಸಚಿವರು ಉತ್ತರಿಸಿ ಈ ರೀತಿಯ ದೂರುಗಳು ಮೊದಲು ಕೇಳಿ ಬರುತ್ತಿತ್ತು. ಆದರೆ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡಾ ರವರು ಕುಲಪತಿಗಳಾದ ನಂತರ ಹಲವಾರು ಸಮಸ್ಯೆಗಳು ಬಗೆಹರಿದಿದ್ದು, ಹಾಗೂ ಈಗಿರುವ ಉಪಕುಲಪತಿಗಳು ನಮ್ಮ ಸರ್ಕಾರದ ನಿಲುವುಗಳಿಗೆ ಸರಿಯಾದ ಸ್ಪಂದನೆಗಳನ್ನು ಸಹ ನೀಡುತ್ತಿರುತಾರೆ. ಕರ್ನಾಟಕ ಕಂಪಾಟ್ಮೆAðಟಲ್ ಲೈಸೆಡ್ ಹಾರಿಜಾಂಟಲ್ ರಿಸರ್ವೇಶನ್ ರಡಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. ೨೫ ಮೀಸಲಾತಿಯನ್ನು ನೀಡುತ್ತಿರುತ್ತಾರೆ ಹಾಗೂ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೇ. ೧೫ ರಷ್ಟು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಶೇ. ೭.೫ ರಷ್ಟು ಹಿಂದುಳಿದ ವರ್ಗಗಳಿಗೆ ಶೇ. ೨೭ ರಷ್ಟು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. ೧೦ ರಷ್ಟು ಅಂಗವಿಕಲರಿಗೆ ಶೇ ೫ ರಷ್ಟು ಮಹಿಳೆಯರಿಗೆ ಶೇ. ೩೦ ರಷ್ಟು ನೀಡುತ್ತಿರುತ್ತಾರೆ. ಅದರಿಂದ ನನ್ನ ಗಮನಕ್ಕೆ ಯಾವುದೇ ದೂರುಗಳು ಬಂದಿರುವುದಿಲ್ಲ, ಯಾವುದಾದರೂ ದೂರುಗಳಿದ್ದಲ್ಲಿ ನನ್ನ ಗಮನಕ್ಕೆ ತಂದರೆ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಿಸುವುದಾಗಿ ತಿಳಿಸಿದರು.

ಚಿತ್ರ ೧೨ ಕೆ.ಎಲ್.ಆರ್. ೦೧ ಎಂ. ಎಲ್. ಸಿ ಅನಿಲ್‌ಕುಮಾರ್ ಭಾವಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net