ಕರ್ತವ್ಯ ಲೋಪ, ಪ್ರಕರಣ ದಾಖಲು

Crime Logo
Published on

ಚಿತ್ರದುರ್ಗ: ಕರ್ತವ್ಯ ಲೋಪ ಆರೋಪದಡಿ ಜಿಲ್ಲಾಧಿಕಾರಿ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಸೀಲ್ದಾರ್ ಬಿ.ಎಸ್.ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಕೆ.ವಿ.ವೀರಭದ್ರಪ್ಪ ಅವರ ವಿರುದ್ಧ ಗುರುವಾರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹೈಕೋರ್ಟ್ ನಿರ್ದೇಶನದಂತೆ ಚಳ್ಳಕೆರೆ ತಾಲೂಕು ಗೌರಸಮುದ್ರ ಮಾರಮ್ಮ ದೇವಾಲಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ಕಡತವನ್ನು ಡಿಸಿ ಕೋರ್ಟಿನ ವಿಚಾರಣೆಗೆ ಹಾಜರುಪಡಿಸದೆ ಕರ್ತವ್ಯ ಲೋಪವೆಸಿದ್ದರು.

ಧಾರ್ಮಿಕ ದತ್ತಿ ತಹಸೀಲ್ದಾರ್ ಕಚೇರಿಯಲ್ಲಿದ್ದ ದೇವಾಲಯ ಹಾಗೂ ಹೈಕೋರ್ಟ್ ಕಡತಗಳನ್ನು ಸೆ. 8 ಹಾಗೂ 27ರಂದು ಡಿಸಿ ಕೋರ್ಟಿನ ವಿಚಾರಣೆಗೆ ಹಾಜರುಪಡಿಸಿರಲಿಲ್ಲ. ಈ ಕುರಿತಂತೆ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು 30ರಂದು ಕಾರಣ ಕೇಳಿ ಅಧಿಕಾರಿ, ನೌಕರಿನಿಗೆ ಜಾರಿ ಮಾಡಿದ್ದ ನೋಟೀಸ್‌ಗೆ, ಮುಂದಿನ ವಿಚಾರಣೆಯೊಳಗೆ ಕಡತ ಹಾಜರುಪಡಿಸುವುದಾಗಿ ಉತ್ತರಿಸಿದ್ದರು. ಆದರೆ, ಕಡತ ಕಳೆದಿದೆ ಎಂದು ಅ.11ರಂದು ಉತ್ತರ ನೀಡಿದ್ದರು.

ಕಡತ ಕಳೆದು, ಪಕ್ಷಗಾರರು, ವಕೀಲರಿಗೆ ತೊಂದರೆ ಉಂಟು ಮಾಡಿದ್ದಲ್ಲದೆ, ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿದ್ದಾರೆಂದು ಇಬ್ಬರ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಪತ್ರಾಂಕಿತ ಸಹಾಯಕ ಜಿ.ಸಂತೋಷ್‌ಕುಮಾರ್ ಅವರು ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net