ಕರೊನಾದಿಂದ ಸ್ಥಗಿತಗೊಂಡ ಸಪ್ತಪದಿ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ

Published on

ಮಡಿಕೇರಿ: ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಸಪ್ತಪದಿ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಮುಜರಾಯಿ ದೇವಾಯಗಳಲ್ಲಿ ವಿವಾಹ ಆಗುವ ಸಪ್ತಪದಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ೪,೫೦೦ ಜನ ಅರ್ಜಿ ಸಲ್ಲಿಸಿ ದ್ದು, ೨,೫೦೦ ಅರ್ಜಿ ಮಾನ್ಯ ಮಾಡಲಾಗಿತ್ತು. ಇದೀಗ ಮತ್ತೆ ಚಾಲನೆ ನೀಡಲಾಗುವುದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮನವಿ ಮಾಡಿದರು.
ವಧುವಿಗೆ ೧೦ ಸಾವಿರ, ವರನಿಗೆ ೫ ಸಾವಿರ ರೂ. ನೀಡಲಾಗುವುದು. ತಾಳಿ ಖರೀದಿಗೆ ೪೦ ಸಾವಿರ ರೂಪಾಯಿ ನೀಡಲಾಗುವುದು. ಪ್ರತಿ ತಿಂಗಳ ೨ ದಿನ ಸಪ್ತಪದಿ ನಡೆಯಲಿದೆ. ಫಲಾನುಭವಿಗಳು ಇಚ್ಛಿಸಿದ್ದಲ್ಲಿ ಅವರು ಬಯಸಿದ್ದ ದಿನ ದೇವಾಲಯದಲ್ಲಿ ವಿವಾಹ ನೆರವೇರಿಸ ಲಾಗುವುದೆಂದರು.

ತಲಕಾವೇರಿಯಲ್ಲಿರುವ ಭಗ್ನಗೊಂಡ ಶಿವಲಿಂಗ ವಿಸರ್ಜನೆಗೆ ಸಂಬಂಧಿಸಿದ್ದಂತೆ ೧೦ ದಿನದೊಳಗೆ ಅಧಿಕಾರಿಗಳು, ಧಾರ್ಮಿಕ ಪ್ರಮುಖರು, ವಿಷಯ ಪರಿಣಿತರ ಸಭೆ ಕರೆಯಲಾಗುವುದು. ಧಾರ್ಮಿಕ ಭಾವನೆಗೆ ಧಕ್ಕೆಯಾಗದ್ದಂತೆ ಧಾರ್ಮಿಕ ವಿಧಿವಿಧಾನದಂತೆ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಅತೀ ಶೀಘ್ರ ಶಿವಲಿಂಗ ವಿಸರ್ಜನೆಗೆ ಸಂಬಂಧಿಸಿದ್ದಂತೆ ನಿರ್ಧಾರಕ್ಕೆ ಬರಲಾಗುವುದು. ಸಮುದ್ರದಲ್ಲಿ ಶಿವಲಿಂಗ ವಿಸರ್ಜ ನೆ ಮಾಡದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ದಾವೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net