ಕರೊನಾ ಪೂರ್ವದಷ್ಟು ಟೋಲ್​ ಶುಲ್ಕ ವಸೂಲಿ

Published on

ಅಲ್ಲದೆ, ಲಾಕ್​ಡೌನ್​ ಸಡಿಲಿಕೆ ನಂತರ ಟೋಲ್​ ಸಂಗ್ರಹ ಹೆಚ್ಚುತ್ತಿದೆ. ಅದರಂತೆ ಜೂನ್​ ತಿಂಗಳಲ್ಲಿ 1,511.83 ಕೋಟಿ ರೂ. , ಜುಲೈನಲ್ಲಿ 1,623 ಕೋಟಿ ರೂ. ಹಾಗೂ ಆಗಸ್ಟ್​ನಲ್ಲಿ 1,712.58 ಕೋಟಿ ರೂ. ಟೋಲ್​ ವಸೂಲಿಯಾಗಿತ್ತು.

ಕರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕಿಂತ ಮುಂದಿನ ತಿಂಗಳಾದ ೆಬ್ರವರಿಯಲ್ಲಿ ದೇಶಾದ್ಯಂತ 1,841 ಕೋಟಿ ರೂ. ಟೋಲ್​ ಸಂಗ್ರಹವಾಗಿತ್ತು. ಅದನ್ನು ಗಮನಿಸಿದರೆ ಸೆಪ್ಟೆಂಬರ್​ ತಿಂಗಳಲ್ಲಿ ೆಬ್ರವರಿಗಿಂತ 100 ಕೋಟಿ ರೂ. ಹೆಚ್ಚಿಗೆ ಟೋಲ್​ ಶುಲ್ಕ ವಸೂಲಿಯಾಗಿದೆ.

100 ಕೋಟಿ ರೂ. ಹೆಚ್ಚು ಸಂಗ್ರಹ:

ಕರೊನಾ ಸೋಂಕಿನ ಭೀತಿ, ಲಾಕ್​ಡೌನ್​ನಿಂದಾಗಿ ಮಾರ್ಚ್​ ಅಂತ್ಯದಿಂದ ಮೇ ತಿಂಗಳ ಅಂತ್ಯದವರೆಗೆ ಟೋಲ್​ ಸಂಗ್ರಹ ಕಡಿಮೆಯಾಗಿತ್ತು. ಲಾಕ್​ಡೌನ್​ ಸಡಿಲಿಕೆ ನಂತರ ವಾಹನಗಳ ಓಡಾಟ ಹೆಚ್ಚಾಗಿ ಟೋಲ್​ ಸಂಗ್ರಹವೂ ಏರಿಕೆಯಾಗಿತ್ತು. ಅದರೀಗ ಕರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೂ ಹಿಂದಿನ ತಿಂಗಳು ಸಂಗ್ರಹವಾಗುತ್ತಿದ್ದ ಟೋಲ್​ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹವಾಗುವಂತಾಗಿದೆ. ಸೆಪ್ಟೆಂಬರ್​ ತಿಂಗಳಲ್ಲಿ 1,940.60 ಕೋಟಿ ರೂ. ಟೋಲ್​ ಸಂಗ್ರಹವಾಗಿದೆ.

ಬೆಂಗಳೂರು: ಕರೊನಾ ಭೀತಿ ನಡುವೆಯೇ ವಾಹನಗಳ ಓಡಾಟ ಹೆಚ್ಚಾಗಿದ್ದು, ತಿಂಗಳಿನಿಂದ ತಿಂಗಳಿಗೆ ಟೋಲ್​ ಸಂಗ್ರಹದ ಪ್ರಮಾಣ ಏರಿಕೆಯಾಗುತ್ತಿದೆ. ಅದರಂತೆ ಸೆಪ್ಟೆಂಬರ್​ ತಿಂಗಳಲ್ಲಿ ಕರೊನಾ ಪೂರ್ವಕ್ಕಿಂತ ಹೆಚ್ಚಿನ ಟೋಲ್​ ಶುಲ್ಕ ವಸೂಲಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net