

ಚಿತ್ರದುರ್ಗ: ಕರೊನಾ ನಿಯಂತ್ರಣ ನಿಟ್ಡಿನಲ್ಲಿ ಆರೋಗ್ಯ ಇಲಾಖೆ ಜತೆ ರಕ್ಷಣಾ ಇಲಾಖೆ ಕೂಡ ಕೈ ಜೋಡಿಸಲಿದೆ ಎಂದು ಎಸ್ಪಿ ಜಿ.ರಾಧಿಕಾ ಹೇಳಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಇಂದು ಬೆಳಗ್ಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ವಿದೇಶಿಗರು ಸೇರಿಂದತೆ ಶಂಕಿತ ಸೋಂಕು ಪೀಡಿತರು ಇದ್ದರೆ ಅಂಥವರ ಮನೆಯಿಂದ ೧೪ ದಿನಗಳ ಕಾಲ ಹೊರ ಬರಂದತೆ ನೋಡಿಕೊಳ್ಳಲು ಎಲ್ಲ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮನೆಯಲ್ಲಿ ಇರುವುದಾಗಿ ಹೇಳಿ ಹೊರಗೆ ಬರುವಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.
ಸಾಮಾಜಿಕ ಜಾಲ ತಾಣಗಳಲ್ಲಿಯ ವದಂತಿಗಳನ್ನು ನಂಬಬಾರದು. ಈ ಕಾಯಿಲೆ ಕುರಿತು ಪೊಲೀಸರಿಗೆ ಸರಿಯಾದ ಮಾಹಿತಿ ಇರಲಿ.
ಯಾರಲ್ಲಾದರೂ ಕರೊನಾ ಲಕ್ಷಣಗಳು ಕಂಡು ಬಂದಲ್ಲು ಅವರನ್ನು ಕೂಡಲೇ ಅಂಬ್ಯುಲೆನ್ಸ್ ನಲ್ಲೇ ಅಸ್ಪತ್ರೆಗೆ ಕಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಡಿಎಚ್ಒ ಡಾ.ಪಾಲಾಕ್ಷ ಮಾತನಾಡಿ ಕರೊನಾ ಬಗ್ಗೆ ಆತಂಕ ಬೇಡ ಆದರೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಮರೆಯುವಂತಿಲ್ಲ ಎಂದರು.
ಬಸವೇಶ್ವರ ಆಸ್ಪತ್ರೆ ವೈದ್ಯರು ಕರೊನಾ ಕುರಿತು ಮಾಹಿತಿ ನೀಡಿದರು.
ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗ, ತಿಪ್ಪೇಸ್ವಾಮಿ ಮೊದಲಾದ ಅಧಿಕಾರಿಗಳು ಇದ್ದರು.