ಕರಡಿಲಕ್ಕನ ಕೆರೆ ಏತನೀರಾವರಿ ಯೋಜನೆಗೆ ಚಾಲನೆ

BTP03Photo1
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ರೈತರಿಗೆ ಎರಡನೇ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ಕರಡಿಲಕ್ಕನ ಕೆರೆ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಚನ್ನಕೇಶವಪುರ ಗ್ರಾಮದ ಬಳಿ ಕರಡಿಲಕ್ಕನ ಕೆರೆ ಏತನೀರಾವರಿ 2022-23ನೇ ಸಾಲಿನ (ನೀರು ಹರಿಸುವ)ಯಂತ್ರಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಯಂತ್ರದ ಲೋಪದೋಷದಿಂದ ತಡವಾಗಿ ನಾಲೆಗಳಿಗೆ ನೀರು ಬಿಡಲಾಗಿದೆ. ನಾಲೆ ಹಾಗೂ ಯಂತ್ರೋಪಕರಣಗಳ ನವೀಕರಣ ಸಂಬಂಧ ಸರ್ಕಾರದಿಂದ ಅನುಮತಿ ದೊರೆತಿದ್ದು, ಮುಂದಿನ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಹಾರಂಗಿ ಇಲಾಖೆಯ ಇಇ ಪ್ರಭುಸ್ವಾಮಿ, ಎಇಇ ಎನ್.ಕೆ ನವೀನ್ ಕುಮಾರ್, ತಾಪಂ ಇಒ ಕೃಷ್ಣಕುಮಾರ್, ಲೋಕೋಪಯೋಗಿ ಎಇಇ ಜಯಂತ್, ಮುಖಂಡರಾದ ಸುಂದರ್, ಹನುಮಂತು, ದೊಡ್ಡನೇರಳೆ ಅಪ್ಪಾಜಿಗೌಡ, ಕುಮಾರಶೆಟ್ಟಿ, ಮಹದೇವ್, ಮೈಲಾರಪ್ಪ, ನಂದೀಶ್, ಕುಮಾರ್, ರಾಜಶೇಖರ್, ರವಿಗೌಡ, ವಿದ್ಯಾಶಂಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net