

ಕಳಸ: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ತಮಿಳು ಚಿತ್ರನಟ ಕಮಲಹಾಸನ್ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಡಾ.ರಾಜ್ ಕನ್ನಡ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣದಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಮಹಾವೀರ ವೃತ್ತ ಬಳಿ ಕಮಲಹಾಸನ್ ಅವರ ಬ್ಯಾನರ್‌ಗೆ ಬೆಂಕಿ ಹಚ್ಚಿ ಘೋಷಣೆ ಕೂಗಿದರು. ನಂತರ ಕಳಸ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಕಾವ್ಯಾ ಅವರಿಗೆ ಮನವಿ ಸಲ್ಲಿಸಿದರು. ಡಾ. ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಮಾತನಾಡಿ, ಕಮಲಹಾಸನ್ ಹೇಳಿಕೆ ಅಸಂಬದ್ಧವಾಗಿದ್ದು ಕೋಟ್ಯಂತರ ಕನ್ನಡಿಗರಿಗೆ ಅವಮಾನ ಮಾಡಿದಂತಾಗಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಕರವೇ ಗೌರವಾಧ್ಯಕ್ಷ ಶರ್ೀ ಮಾತನಾಡಿ, ಕನ್ನಡಿಗರು ಶಾಂತ ಸ್ವಾಭಾವದವರು. ಹಾಗಂತ ಕನ್ನಡ ಭಾಷೆ, ನೆಲ-ಜಲಕ್ಕೆ ಧಕ್ಕೆ ಬಂದಾಗ ನಾವು ಬಿಡುವುದಿಲ್ಲ. ಕಮಲಹಾಸನ್ ಕನ್ನಡ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ನಾವು ಸಹಿಸುವುದಿಲ್ಲ. ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಕಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ, ಸಂಸೆ ಕರವೇ ಘಟಕ ಅಧ್ಯಕ್ಷ ಚೋಯಿ, ಸುಂಕಸಾಲೆ ಅಧ್ಯಕ್ಷ ಹೂವಪ್ಪ, ಕಾರ್ಯಕರ್ತರಾದ ಗೋಪಾಲ, ಸಂತೋಷ, ಅರವಿಂದ, ಸುಂದರೇಶ ಆಚಾರ್ಯ, ರಾಘವೇಂದ್ರ ಆಚಾರ್ಯ, ಹರೀಶ ಇತರರಿದ್ದರು.