

ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ,ಜನಪರ ಹಿತಾಸಕ್ತಿಗಳ ಬಲಿಕೊಟ್ಟು ದೇಶದ ಸರ್ವಾಂಗೀಣ ಅಭಿವೃದ್ಧಿಯ ವಿರುದ್ಧವಾದ ಬೂಟಾಟಿಕೆ ಬಜೆಟ್ ಆಗಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ನಯಾಪೈಸೆ ನೀಡದ ನಿರಾಶಾದಾಯಕ ಬಜೆಟ್ ಕೂಡ. ಕರ್ನಾಟಕದಿಂದಲೇ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕದ ಜನತೆಗೆ ಬಜೆಟ್ ನಲ್ಲಿ ಸಿಹಿ ನೀಡದೆ ಕನ್ನಡಿಗರಿಗೆ ದ್ರೋಹವೆಸಗಿದ್ದಾರೆ. ಈ ದೇಶದ ಬೆನ್ನೆಲುಬಾದ ರೈತರು, ಕಾರ್ಮಿಕರು, ಕೆಳ ಮಧ್ಯಮ ವರ್ಗ ಹಾಗೂ ಮಹಿಳೆಯರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.