ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

34
Published on

ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಟಿಪ್ಪು ಸುಲ್ತಾನರನ್ನು ವೈಭವೀಕರಿಸುವ ಭರದಲ್ಲಿ ಇತಿಹಾಸವನ್ನು ತಿರುಚಿದ್ದಾರೆ ಎಂದು ಆರೋಪಿಸಿ ಸಚಿವರ ಹೇಳಿಕೆಯನ್ನು ಖಂಡಿಸಿ ಸೋಮವಾರ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.

ವೇದಿಕೆ ಅಧ್ಯಕ್ಷ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕನ್ನಡಾಂಬೆ ರಕ್ಷಣಾ ವೇದಿಕೆ ಕಾರ್ಯಕರ್ತರು ಸಚಿವ ಎಚ್.ಸಿ.ಮಹದೇವಪ್ಪ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪುಗೂ ಮೊದಲು ಮೈಸೂರು ಅರಸಲು ಜಲಾಶಯ ನಿರ್ಮಿಸಲುವ ಯೋಜನೆ ರೂಪಿಸಿದ್ದರು. ಕ್ರಿ.ಶ.1595ರಲ್ಲಿ ದಳವಾಯಿ ಕುಮಾರರಾಮ, 1659-1673ರ ನಡುವೆ ಕಂಠೀರವ ನರಸರಾಜ ಒಡೆಯರ್ ಅವರು, ಶ್ರೀರಂಗಪಟ್ಟಣದ ಉತ್ತರದಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದರು. 1638-1659 ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಕಾವೇರಿಗೆ ಒಂದು ಅಣೆಕಟ್ಟು ಕಟ್ಟಲು ಪ್ರಯತ್ನಿಸಿದ್ದರು. ತದ ನಂತರ ಟಿಪ್ಪು ಸುಲ್ತಾನ್ ಕೂಡ ಅಣೆಕಟ್ಟೆ ಕಟ್ಟಲು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಬಗ್ಗೆ ಪರ್ಶಿಯನ್ ಭಾಷೆಯಲ್ಲಿ ಅವರು ಬರೆಸಿದ್ದ ಶಾಸನ 1911ರಲ್ಲಿ ಪತ್ತೆಯಾಗಿತ್ತು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಆರ್‌ಎಸ್ ಜಲಾಶಯ ನಿರ್ಮಿಸುವಾಗ ಅಲ್ಲಿ ಸಿಕ್ಕಿದ ಟಿಪ್ಪು ಶಾಸನವನ್ನು ಕನ್ನಡದಲ್ಲಿ ಬರೆಸಿ ಜಲಾಶಯದ ದ್ವಾರದ ಬಳಿ ಇರಿಸಿದ್ದು ಸಹ ನಾಲ್ವಡಿ ಅವರ ಹೆಗ್ಗಳಿಗೆ. ಇಂತಹ ಇತಿಹಾಸ ತಿಳಿಯದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಸ್.ಸಿ.ಮಹದೇವಪ್ಪ ಅವರು, ಕೇವಲ ಟಿಪ್ಪು ಸುಲ್ತಾನ್ ಅವರನ್ನು ಮಾತ್ರ ನೆನಪಿಸಿಕೊಳ್ಳುವುದು ಸರಿಯಲ್ಲ, ಅದಕ್ಕೂ ಮೊದಲು ಜಲಾಶಯ ಕಟ್ಟಲು ನಿರ್ಧರಿಸಿದ್ದ ಮೈಸೂರು ಅರಸರನ್ನೂ ನೆನಪಿಸಿಕೊಳ್ಳಬೇಕಿತ್ತು ಎಂದು ಆಗ್ರಹಿಸಿದರಲ್ಲದೇ, ಇತಿಹಾಸ ತಿರುಚುವ ಪ್ರಯತ್ನದ ವಿರುದ್ಧ ನಮ್ಮ ಪ್ರತಿಭಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಪದಾಧಿಕಾರಿಗಳಾದ ನಂಜುಂಡ, ಸಂತೋಷ್, ಮಂಜುಳಾ,ಡಿ.ಪಿ.ಕೆ. ಪರಮೇಶ್, ಸಿಂಧುವಳ್ಳಿ ಶಿವಕುಮಾರ್, ಕೃಷ್ಣೇಗೌಡ, ಲೋಕೇಶ್, ಲಕ್ಷ್ಮಿ, ನೇಹ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net