ಕನ್ನಡ ಕಾವ್ಯ ಕಣಜ ನಾಟಕ ಪ್ರದರ್ಶನ

Drama-games
Published on


ನೀನಾಸಂನ ನಿರ್ಮಾತೃ ಕೆ.ವಿ.ಸುಬ್ಬಣ್ಣ ಸ್ಮರಣೆ ಅಂಗವಾಗಿ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಜು.7 ರಂದು ಸಂಜೆ 6.30ಕ್ಕೆ ‘ಕನ್ನಡ ಕಾವ್ಯ ಕಣಜ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ನಾಟಕದ ರಂಗಪಠ್ಯ, ಸಂಗೀತ, ನಿರ್ದೇಶನವನ್ನು ರಂಗಕರ್ಮಿ ಡಾ.ಶ್ರೀಪಾದ ಭಟ್ ನಿರ್ವಹಿಸಿದ್ದಾರೆ. ಇದೊಂದು ಕಾವ್ಯ ಪ್ರಯೋಗ. ಕಾವ್ಯ ಪ್ರಸ್ತುತಿ. ಕನ್ನಡ ನಾಡು ನುಡಿ ಇದುವರೆಗೂ ಬೆಳೆಸಿಕೊಂಡು ಬಂದ ಸಂಬಂಧದ ವಿವಿಧ ವಿನ್ಯಾಸಗಳನ್ನು ಕವಿ ಪದಗಳ ಮೂಲಕ ಕಾಣಲಾಗಿದೆ. ಇಲ್ಲಿ ಶಾಸನಗಳಿವೆ, ಕವನಗಳಿವೆ, ಹಾಡಿದೆ, ವಚನವಿದೆ, ಕತೆಗಳಿವೆ, ಕಾದಂಬರಿಯ ಭಾಗಗಳಿವೆ. ಇವೆಲ್ಲವೂ ನಟರ ಶರೀರ ಮತ್ತು ಶಾರೀರಗಳನ್ನು ಆಧರಿಸಿ ಅಭಿನೀತಗೊಳ್ಳಲಿದೆ. ಕನ್ನಡ ಕಾವ್ಯ ಕಣಜ, ಕನ್ನಡ ಕಾವ್ಯಗಳ ರಂಗಪ್ರಸ್ತುತಿ. ಶಾಸನ ಪದಗಳಿಂದ ಆರಂಭಿಸಿ ಈ ಹೊತ್ತಿನವರೆಗಿನ ಸಾಹಿತ್ಯ ಚರಿತ್ರೆಯನ್ನು ಅನುಲಕ್ಷಿಸಿ ಅವುಗಳಲ್ಲಿ ಕೆಲವು ಪಠ್ಯಗಳನ್ನು ಆಯ್ದು ಪ್ರಸ್ತುತ ಪಡಿಸಲಾಗುತ್ತಿದೆ. ಇಲ್ಲಿ ಆದರ್ಶ ಮನುಷ್ಯರ ಹುಡುಕಾಟವಿದೆ. ಸಂಬಂಧಗಳ ವಿವಿಧ ಸ್ವರೂಪಗಳ ಅನ್ವೇಷಣೆ ಇದೆ. ವರ್ಣ, ವರ್ಗ, ಲಿಂಗ ತಾರತಮ್ಯಗಳ ಸ್ವರೂಪ ಕಾರಣಗಳ ಹುಡುಕಾಟದ ಪ್ರಯತ್ನವೂ ಇಲ್ಲಿದೆ. ಕಾವ್ಯಗಳನ್ನು ರಂಗದ ಮೇಲೆ ಪ್ರಯೋಗಿಸಬಹುದಾದ ಹಲವು ಮಾದರಿಗಳ ಪ್ರಸ್ತುತಿಯೂ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net