ಕದಲೂರು ಉದಯ್ ಅಭಿಮಾನಿಗಳ ಸಂಘ ಉದ್ಘಾಟನೆ

14KMD-1 (1)
ಕೆ.ಎಂ.ದೊಡ್ಡಿ ಸಮೀಪದ ಬೊಮ್ಮನದೊಡ್ಡಿ ಗ್ರಾಮದಲ್ಲಿ ಕದಲೂರು ಉದಯ್ ಅಭಿಮಾನಿಗಳ ಸಂಘವನ್ನು ಸಮಾಜ ಸೇವಕ ಕದಲೂರು ಉದಯ್ ಉದ್ಘಾಟಿಸಿದರು.
Published on

ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

ಸಮೀಪದ ಬೊಮ್ಮನದೊಡ್ಡಿ ಗ್ರಾಮದಲ್ಲಿ ಕದಲೂರು ಉದಯ್ ಅಭಿಮಾನಿಗಳ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಮದ್ದೂರು ಕ್ಷೇತ್ರದಲ್ಲಿ ಕರೊನಾ ಸಂದರ್ಭದಿಂದ ಆರಂಭವಾದ ನನ್ನ ಸಮಾಜ ಸೇವೆ ನಿರಂತರವಾಗಿ ನಡೆಯುತ್ತಿದೆ. ಕ್ಷೇತ್ರದ ಜನರ ನಾಡಿ ಮಿಡಿತ ಅರಿತು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಅಧಿಕಾರದಲ್ಲಿ ಇಲ್ಲದಿದ್ದರೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಈಗಾಗಲೇ ಕ್ಷೇತ್ರದ ಜನತೆ ನನ್ನನ್ನು ರಾಜಕೀಯಕ್ಕೆ ಆಹ್ವಾನಿಸುತ್ತಿದ್ದು, ನನ್ನ ಬೆಂಬಲಿಗರು ಮತ್ತು ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಮುಖಂಡರಾದ ನಟರಾಜು, ಬಸವಲಿಂಗ, ನಾಗರಾಜು, ಸ್ವಾಮಿ, ಮರೀಗೌಡ, ಜವರೇಗೌಡ, ಶಿವರಾಜು, ಸುರೇಶ್, ಜೋಗಿ, ಬೋರೇಗೌಡ, ಬಸವೇಗೌಡ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net