ಕತ್ತೆಗಳಿಗೂ ‘ಎಂಡಿಎಂಎ’ ಡ್ರಗ್ಸ್ ಅಚ್ಚುಮೆಚ್ಚು

donky
Published on

ಬೆಂಗಳೂರು: ದೇಶಾದ್ಯಂತ ಸದ್ದುಮಾಡುತ್ತಿರುವ ಡ್ರಗ್ಸ್ ಮಾಫಿಯಾದಲ್ಲಿ ಎಂಡಿಎಂಎ ಮಾತ್ರೆ ಹಾಗೂ ಎಲ್‌ಎಸ್‌ಡಿ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದ್ದು, ಈ ಡ್ರಗ್ಸ್‌ಗಳ ಇತಿಹಾಸ ಕೆದಕಿದಾಗ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಗುಡ್ಡಗಾಡು ಪ್ರದೇಶದಲ್ಲಿ ಲಗೇಜು ಹೊತ್ತೊಯ್ಯುವ ಕತ್ತೆಗಳಿಗೆ ಶಕ್ತಿವರ್ದಕವಾಗಿ ‘ಎಂಡಿಎಂಎ’ ಮಾತ್ರೆಗಳನ್ನು ನೀಡುತ್ತಿದ್ದ ಸಂಗತಿ ಬಹಿರಂಗಗೊಂಡಿದೆ.
ಬೆಲೆ ಬಾಳುವ ಡ್ರಗ್ಸ್ ಎಂಡಿಎಂಎ ಮಾತ್ರೆಗಳಿಗೆ ಎಲ್ಲೆಡೆ ಹೆಚ್ಚಿನ ಬೇಡಿಕೆಯಿದ್ದು, ಇದನ್ನು ಸೇವಿಸಿದ ವ್ಯಕ್ತಿ ಕನಿಷ್ಠ 2 ದಿನಗಳ ಕಾಲ ಪ್ರಜ್ಞಾವಸ್ಥೆಯಲ್ಲಿ ಇರುವುದಿಲ್ಲ. ಈ ಹಿಂದೆ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಉತ್ತರ ಭಾರತದ ವ್ಯಾಪಾರಿಗಳು ಕತ್ತೆಗಳ ಬೆನ್ನ ಮೇಲೆ ಮೂಟೆಗಳನ್ನಿಟ್ಟು ವಸ್ತುಗಳನ್ನು ಬೇರೆಡೆ ಸಾಗಿಸುತ್ತಿದ್ದರು. ಗುಡ್ಡಗಾಡು ಪ್ರದೇಶದಲ್ಲಿ ಕತ್ತೆಗಳಿಗೆ ಈ ಮೂಟೆಗಳನ್ನು ಹೊತ್ತು ಸಾಗಲು ಕಷ್ಟವಾಗುತ್ತಿತ್ತು. ಕತ್ತೆಗಳಿಗೆ ಶಕ್ತವರ್ಧಕವಾಗಿ ‘ಎಂಡಿಎಂಎ’ಮಾತ್ರೆಗಳನ್ನು ನೀಡುತ್ತಿದ್ದರು. ಈ ಮಾತ್ರೆಗಳನ್ನು ಸೇವಿಸಿ ಕೆಲ ಹೊತ್ತಿನಲ್ಲಿ ಎಂತಹ ಗುಡ್ಡಗಾಡಿನಲ್ಲೂ ಕತ್ತಗಳು ಸಲೀಸಾಗಿ ವಸ್ತುಗಳನ್ನು ಹೊತ್ತು ಸಾಗುತ್ತಿದ್ದವು. ನಂತರ ಕತ್ತೆಗಳ ಜತೆಗೆ ಕುದುರೆಗಳಿಗೂ ಮಾತ್ರೆ ರೂಪದಲ್ಲಿರುವ ‘ಎಂಡಿಎಂಎ’ ಡ್ರಗ್ಸ್ ನೀಡಲಾಗುತ್ತಿತ್ತು. ಇದನ್ನು ಸೇವಿಸಿದ ಕತ್ತೆ, ಕುದುರೆ ಸೇರಿ ಇನ್ನೀತರ ಪ್ರಾಣಿಗಳು ನೂರಾರು ಕಿ.ಮೀ ಗಟ್ಟಲೆ ಆಹಾರವಿಲ್ಲದೆ ವಸ್ತುಗಳನ್ನು ಹೊರುತ್ತಿದ್ದವು. ಈ ಹಿಂದೆ ವ್ಯಾಪಾರಿಗಳ ಬಳಿ ಹೆಚ್ಚಿನ ಪ್ರಮಾಣದ ಎಂಡಿಎಂಎ ಇರುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net