ಕಲಬುರಗಿ ಜಿಲ್ಲೆಯಲ್ಲಿ ಪ್ರಾಣ ಹಾನಿ ಆಗಿಲ್ಲ. ಕೇಂದ್ರದಿಂದ ಹೆಲಿಕಾಪ್ಟರ್, ಬೋಟ್ ಎಲ್ಲ ಬಂದಿವೆ.
ಶಿರಾ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದೆ. ಶಿರಾ ಬಿಜೆಪಿ ಅಭ್ಯರ್ಥಿ ಹೊಸಬರು. ಅವರ ಭವಿಷ್ಯದ ದೃಷ್ಟಿಯಿಂದ ಒಂದು ಸಲ ಮುಖ ತೋರಿಸಿ ಹೋಗಿ ಎಂದು ಹೇಳಿದ್ದರು. ಹಾಗಾಗಿ ನಾನು ಶಿರಾಗೆ ಹೋಗಿ ಬಂದೆ. ಅನಿವಾರ್ಯವಾಗಿ ಹೋಗಬೇಕಾಗಿತ್ತು ಎಂದು ಹೇಳಿದರು.
ನನ್ನ ಇಡೀ ಕುಟುಂಬ ಕರೊನಾ ಸಂಕಷ್ಟದಲ್ಲಿ ಸಿಲುಕಿದೆ. ನಾನೂ ಕೂಡ ಕರೊನಾ ಸಂಕಷ್ಟಕ್ಕೆ ಸಿಲುಕಿದ್ದೆ. ಈಗ ಚೇತರಿಸಿಕೊಂಡಿದ್ದೇನೆ. ನನಗೆ 70 ವರ್ಷ ವಯಸ್ಸು. ನನ್ನ ಇಡೀ ಜೀವಮಾನ ನಾನು ಹೇಗೆ ಕೆಲಸ ಮಾಡಿದ್ದೇನೆ ಎನ್ನುವುದನ್ನು ಮಾದ್ಯಮಗಳೂ ಗಮನಿಸಿವೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಭಾವುಕರಾದರು.
ಕಲಬುರಗಿಯಲ್ಲಿ ಭಾರಿ ಮಳೆಯಿಂದ ಅನಾಹುತಗಳು ಸಂಭವಿಸಿವೆ. ನಾನು, ನನ್ನ ಕುಟುಂಬ ಪೂರ್ತಿ ಕರೊನಾ ಸಂಕಷ್ಟಕ್ಕೆ ಸಿಲುಕಿದೆ. ಕಾರಣ ಆರೇಳುನೂರು ಕಿ.ಮೀ. ಪ್ರಯಾಣಿಸಲು ಆಗುತ್ತಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಕಣ್ಣೀರು ಹಾಕಿದರು.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸರ್ಕಾರ ನಿಮ್ಮ ಜತೆಗಿದೆ. ಕಲಬುರಗಿ ಡಿಸಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಬೇಸಿಗೆಯಲ್ಲಿ ತಂಪಿರಲಿ ಎಂಬ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ಜನ ಕಲ್ಲು, ಮಣ್ಣಿನಿಂದ ಮನೆ ಕಟ್ಟಿ ಕೊಂಡಿರುತ್ತಾರೆ. ಈ ಮನೆಗಳು ಈಗ ಮಳೆಯಿಂದಾಗಿ ಬೀಳುತ್ತಿವೆ. ಆ ಮನೆಗಳನ್ನು ಸರ್ವೆ ಮಾಡಿ ಪುನರ್ ನಿರ್ಮಾಣ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.