ಕಣ್ಣಿಗೆ ಕಾರದ ಪುಡಿ ಎರಚಿ 12 ಲಕ್ಷ ದೋಚಿದ ಖದೀಮರು

Channagiri, Police, Complaint, Robbery,
Published on

ಮೂಡಲಗಿ: ಬೈಕ್ ಅಡ್ಡಗಟ್ಟಿ ಸವಾರರ ಕಣ್ಣಿಗೆ ಕಾರದ ಪುಡಿ ಎರಚಿ 12 ಲಕ್ಷ ರೂ. ಹಣ ದೋಚಿದ ಘಟನೆ ಗುರ್ಲಾಪುರ ಸಮೀಪದ ಹಾರೂಗೇರಿ ಕ್ರಾಸ್ ಬಳಿ ನಡೆದಿದ್ದು, ಅದು ಇದೀಗ ಬೆಳಕಿಗೆ ಬಂದಿದೆ.

ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಜಾರ್ ಮುಜಾವರ್ ಅವರ ಕಿರಾಣಿ ಹೋಲ್ ಸೇಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇರ್ಷಾರ್ ಮುಜಾವರ ಹಾಗೂ ಸಂಜು ಕೂಹಳ್ಳಿ ಎನ್ನುವವರು ಸಮೀಪದ ಕಿರಾಣಿ ಅಂಗಡಿಗಳಿಗೆ ಹೋಲ್‌ಸೇಲ್ ದರದಲ್ಲಿ ಸಾಮಗ್ರಿ ನೀಡಿ ಬಾಕಿ ಹಣ ಸಂಗ್ರಹ ಮಾಡಿಕೊಂಡು ತೇರದಾಳಕ್ಕೆ ತೆರಳುವಾಗ ನ.20ರಂದು ನಡೆದಿದೆ.

ಎರಡು ಬೈಕ್ ಮೇಲೆ ಬಂದ ನಾಲ್ವರು ಖದೀಮರು ಅವರನ್ನು ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ ಹಣ ದೋಚಿ ಪರಾಯಾಗಿದ್ದಾರೆ. ಈ ಕುರಿತು ಅಂಗಡಿಯ ಮಾಲೀಕ ಜಾರ್ ಮುಜಾವರ್ ಮೂಡಲಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಖದೀಮರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net