ಕಡ್ಡಾಯವಾಗಿ ಶೇ 60 ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸುವಂತೆ ಸೂಚನೆ

Published on

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಉದ್ದಿಮೆಗಳನ್ನು, ನಡೆಸುತ್ತಿರುವ ಉದ್ದಿಮೆದಾರರು ತಮ್ಮ ಉದ್ದಿಮೆಗಳ ಹೊರಭಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವ ನಾಮಫಲಕಗಳ ಮೇಲ್ಭಾಗದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯು ಶೇಕಡಾ 60 ರಷ್ಟು ಇರುವಂತೆ ಹಾಗೂ ಅವಶ್ಯಕವಿದ್ದಲ್ಲಿ ಶೇಕಡಾ 40 ರಷ್ಟು ಆಂಗ್ಲಭಾಷೆ ನಾಮಫಲಕದ ಕೆಳಭಾಗದಲ್ಲಿ ಇರುವಂತೆ ಪ್ರದರ್ಶಿಸಲು ಸೂಚನೆ ನೀಡಲಾಗಿದೆ.

 ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ತಿಳುವಳಿಕೆ ನೀಡಲಾಗಿದ್ದರೂ ಸಹ, ಕೆಲವು ಉದ್ದಿಮೆದಾರರು ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡದಿರುವುದು ಕಂಡು ಬಂದಿರುತ್ತದೆ. ಆದಕಾರಣ, ಉದ್ದಿಮೆದಾರರು ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಾಷೆಯಲ್ಲಿ ಪ್ರದರ್ಶಿಸದಿದ್ದಲ್ಲಿ ಮತ್ತು ಕನ್ನಡಕ್ಕೆ ಅಗ್ರಸ್ಥಾನ ನೀಡದಿದ್ದಲ್ಲಿ ಅಂತಹ ಉದ್ದಿಮೆಗಳ ಉದ್ದಿಮೆ. ಪರವಾನಿಗೆಯನ್ನು ರದ್ದುಪಡಿಸಿ, ಉದ್ದಿಮೆಯನ್ನು ಮುಚ್ಚಿಸಲಾಗುವುದೆಂದು ಅಂತಿಮ ಎಚ್ಚರಿಕೆ ನೀಡಲಾಗಿದೆ ಎಂದು ಮೈಸೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net