ಕಡೆ ಕಾರ್ತಿಕ ಸೋಮವಾರದ ಅಂತರಗAಗೆ ಜಾತ್ರೆಗೆ ಬಜರಂಗದಳದಿAದ ಭರದ ಸಿದ್ದತೆ / ಉಚಿತ ಬಸ್ ಸೇವೆ-ಬೃಹತ್ ಸ್ವಾಗತ ಕಮಾನು/ಕೇಸರಿಮಯವಾದ ಬಸ್‌ನಿಲ್ದಾಣ ವೃತ್ತ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ದಕ್ಷಿಣ ಕಾಶಿಯೆಂದೇ ಖ್ಯಾತಿಯಾದ ನಗರದ ಅಂತರಗAಗೆಯ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರ ಅತ್ಯಂತ ವಿಶೇಷತೆ ಹೊಂದಿದ್ದು, ಲಕ್ಷಾಂತರ ಮಂದಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುವ ಹಿನ್ನಲೆಯಲ್ಲಿ ಭಜರಂಗದಳ, ವಿಹಿಂಪ ಸೇರಿದಂತೆ ಹಿಂದೂಪರ ಸಂಘಟನೆಗಳು ಭಾನುವಾರ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬೃಹತ್ ಸ್ವಾಗತ ಕಮಾನು, ಕೇಸರಿ ಬಂಟಿAಗ್, ಪ್ಲೆಕ್ಸ್ ಕಟ್ಟುವ ಮೂಲಕ ಇಡೀ ವೃತ್ತವನ್ನು ಕೇಸರಿಮಯಗೊಳಿಸಿವೆ.

ಜರಂಗದಳ, ವಿಹಿಂಪ ಮುಖಂಡರು ಪ್ರತಿ ವರ್ಷವೂ ಅತ್ಯಂತ ಅದ್ದೂರಿ ಹಾಗೂ ಶ್ರದ್ಧಾಭಕ್ತಿಗಳಿಂದ ಆಚರಿಸುವ ಕಾಶಿವಿಶ್ವೇಶ್ವರ ಸ್ವಾಮಿಯ ಕಡೆ ಕಾರ್ತಿಕ ಸೋಮವಾರದ ಜಾತ್ರೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಬಜರಂಗದಳ, ವಿಹಿಂಪದ ರಾಜ್ಯ ಮತ್ತು ಜಿಲ್ಲಾ ಮುಖಂಡರು, ಮಾಜಿ ಸಂಸದ ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಮುಂಜಾನೆ ೪ ಗಂಟೆಯಿAದಲೇ ಉಚಿತ ಬಸ್‌ಗಳನ್ನು ಓಡಿಸಲು ಹಲವಾರು ದಾನಿಗಳು ಮುಂದೆ ಬಂದಿದ್ದು, ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಸಿದ್ದತೆ ಮಾಡಿದ್ದಾರೆ.

ಬೃಹತ್ ಕಮಾನುಗಳು ಕೇಸರಿಧ್ವಜಗಳ ಹಾರಾಟ:

ಬಜರಂಗದಳ ಕಾರ್ಯಕರ್ತರು ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಭಕ್ತರನ್ನು ಸ್ವಾಗತಿಸುವ ದೊಡ್ಡ ಕಮಾನಿನೊಂದಿಗೆ ಇಡೀ ಪ್ರದೇಶದಲ್ಲಿ ಕೇಸರಿ ಧ್ವಜಗಳು ರರಾಜಿಸುವಂತೆ ಮಾಡಿದ್ದು, ಇಡೀ ಪ್ರದೇಶವೇ ಕೇಸರಿಮಯವಾಗಿದೆ. ಎಲ್ಲಾ ಕಡೆ ಶಿವನ ಕಟೌಟ್‌ಗಳು, ಪ್ಲೆಕ್ಸ್ಗಳು ಹಾಕಲಾಗಿದ್ದು, ಅಂತರಗAಗೆ ಜಾತ್ರೆಗೆ ಬರುವ ಹಿಂದೂಗಳಿಗೆ ಭವ್ಯ ಸ್ವಾಗತ ಕೋರುವ ಕಮಾನು ತಲೆಯೆತ್ತಿದೆ.

ಕಡೆ ಕಾರ್ತಿಕ ಸೋಮವಾರದ ಜಾತ್ರೆ ಮತ್ತಷ್ಟು ವಿಜೃಂಭಣೆಯಿAದ ನಡೆಸಲು ಪೂರ್ವಸಿದ್ದತೆ ನಡೆಸಿರುವ ಕಾರ್ಯಕರ್ತರು ಬಸ್‌ನಿಲ್ದಾಣ ವೃತ್ತದಲ್ಲಿ ಪೆಂಡಾಲ್ ನಿರ್ಮಿಸಿ, ಜಾತ್ರೆಗಾಗಿ ಬರುವ ಭಕ್ತರಿಗೆ ನೆರಳು ಒದಗಿಸಿ, ಉಚಿತ ಬಸ್ ಸೇವೆಯನ್ನು ಇಲ್ಲಿಂದಲೇ ಆರಂಭಿಸಲು ಸಿದ್ದತೆ ನಡೆಸಿದ್ದಾರೆ.

ಬರುವ ಭಕ್ತಾಧಿಗಳಿಗೆ ಉಚಿತ ಪ್ರಸಾದ, ಕುಡಿಯುವ ನೀರು, ರಕ್ಷಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬಜರಂಗದಳ ಕಾರ್ಯಕರ್ತರು ಕಳೆದೊಂದು ವಾರದಿಂದ ಶ್ರಮಿಸುತ್ತಿದ್ದಾರೆ.

ಭಕ್ತರು ಸ್ವಾಮಿಯ ದರ್ಶನಕ್ಕೆ ಬರಲು ಯಾವುದೇ ಅಡ್ಡಿ ಆತಂಕಕ್ಕೆ ಅವಕಾಶವಿಲ್ಲದಂತೆ ಬಜರಂಗದಳದ ಯುವಕರು ಸ್ವಯಂ ಸೇವಕರಾಗಿ ಹಗಲಿರುಳು ಶ್ರಮಿಸಲು ಸಂಘಟಿತರಾಗಿದ್ದಾರೆ.

ಚಿತ್ರ ೨೪ ಕೆ.ಎಲ್.ಆರ್. ೦೧ ಕೋಲಾರದ ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಗಳಿಸಿರುವ ಅಂತರಗAಗೆ ಜಾತ್ರೆಗೆ ಬರುವ ಭಕ್ತರನ್ನು ಆಹ್ವಾನಿಸಲು ಬಸ್‌ನಿಲ್ದಾಣ ವೃತ್ತದಲ್ಲಿ ಬೃಹತ್ ಕಮಾನು ಹಾಗೂ ಶಿವನ ಬೃಹತ್ ಕಟೌಟ್‌ಗಳನ್ನು ನಿರ್ಮಿಸಿ ಇಡೀ ವೃತ್ತದಲ್ಲಿ ಕೇಸರಿ ಬಂಟಿAಗ್ ಕಟ್ಟಿರುವ ಬಜರಂಗದಳ ಕಾರ್ಯಕರ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net