ಕಡೂರಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಉತ್ಸವ

Published on

ಕಡೂರು: ತಾಲೂಕಿನಾದ್ಯಂತ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳನ್ನು ಭಿತ್ತನೆ

ಮಾಡಿರುವ ರೈತರು ಆಗಸದತ್ತ ಮುಖ ಮಾಡುತ್ತಿದ್ದರೆ. ಇತ್ತ ಮಳೆಗಾಗಿ ಗ್ರಾಮದಲ್ಲಿ

ಕಪ್ಪೆ ಉತ್ಸವ ನಡೆಸುವ ಮೂಲಕ ಅನಾದಿಕಾಲದ ನಂಬಿಕೆ ಪ್ರತೀತಿ

ಮುಂದುವರೆಸಿದ್ದು, ಸಕಾಲದ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ.

ತಾಲೂಕಿನ ಮುಗುಳಿಕಟ್ಟೆ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಲು ಗ್ರಾಮದೇವತೆಗಳ

ಸಮ್ಮುಖದಲ್ಲಿ ಊರು ಮುಂದಿನ ಬಳಿ ಇರುವ ಗೋಕಲ್ಲಿಗೆ 101 ಬಿಂದಿಗೆಯಲ್ಲಿ

ಮುತ್ತೈದೆಯರಿಂದ ಜಲಾಭಿಷೇಕ ನೆರವೇರಿಸಿದರು. ನಂತರ ಬಾವಿಯಲ್ಲಿರುವ

ಕಪ್ಪೆಯನ್ನು ಬಿಂದಿಗೆಯಲ್ಲಿ ಇಟ್ಟುಕೊಂಡು ಸಾಂಪ್ರಾದಾಯಿಕ ಪೂಜೆಯೊಂದಿಗೆ

ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಕಾಲಕ್ಕೆ ಮಳೆಯಾಗುವಂತೆ ವಿಶೇಷ ಪ್ರಾರ್ಥನೆ

ಸಲ್ಲಿಸಿ ನಂತರ ಕಪ್ಪೆಯನ್ನು ಬಾವಿಗೆ ಬಿಡಲಾಗಿದೆ. ಸಂಜೆ ನಂತರ ಗ್ರಾಮದಲ್ಲಿ

ಒಂದಷ್ಟು ಮಳೆಯಾಗಿದ್ದರಿಂದ ಗ್ರಾಮಸ್ಥರು ಹರ್ಷಗೊಂಡಿದ್ದಾರೆ.

ಮಳೆ ಕೈಕೊಟ್ಟಾಗ ರೈತಾಪಿ ವರ್ಗ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಈ

ಹಿಂದೆ ಗ್ರಾಮದ ಪೂರ್ವಜರು ಮಳೆಗಾಗಿ ಪ್ರಾರ್ಥಿಸಲು ಕಪ್ಪೆ ಉತ್ಸವ ನಡೆಸುತ್ತಿದ್ದರು.

ಬಳಿಕ ಮಳೆ ಸುರಿಯುತ್ತಿದ್ದ ನಂಬಿಕೆ ಹಿನ್ನಲೆಯಲ್ಲಿ ಸಕಾಲದಲ್ಲಿ ಮಳೆಗಾಗಿ ಪ್ರಾರ್ಥಿಸಿ

ಕಪ್ಪೆ ಉತ್ಸವ ನಡೆಸಲಾಗಿದೆ ಎಂದು ಮುಗುಳಿಕಟ್ಟೆ ಲೋಕೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net