ಕಟ್ಟಡ ಕಾರ್ವಿುಕರಿಗೆ ಕನಿಕರ ತೋರಿ

bulding mar 20
Published on

ಬೆಂಗಳೂರು: ರಾಜ್ಯದ ಕಟ್ಟಡ ಕಾರ್ವಿುಕರ ಮೇಲೂ ಕರೊನಾ ವೈರಸ್ ಪರಿಣಾಮ ಬೀರಿದ್ದು, ಬಹುತೇಕ ಕಡೆ ಕಟ್ಟಡ ಕೆಲಸ ನಿಂತು ಹೋಗಿದೆ. ಇದರಿಂದಾಗಿ ದಿನಗೂಲಿ ಲೆಕ್ಕದಲ್ಲಿ ಕಾರ್ಯನಿರ್ವಹಿಸುವ ಕಟ್ಟಡ ಕಾರ್ವಿುಕರು ಅತಂತ್ರರಾಗಿದ್ದಾರೆ. ಹೀಗಿರುವಾರ ರಾಜ್ಯ ಸರ್ಕಾರದಿಂದ ಕನಿಷ್ಠ ಭರವಸೆ ಮಾತೂ ಕಟ್ಟಡ ಕಾರ್ವಿುಕರಿಗೆ ಸಿಕ್ಕಿಲ್ಲ ಎಂಬ ಅಭಿಪ್ರಾಯ ಈ ವರ್ಗದಿಂದ ಕೇಳಿಬಂದಿದೆ.

ಉತ್ತರ ಪ್ರದೇಶದಲ್ಲಿ ನೆರವು ಘೋಷಿಸಲಾಗಿದೆ. ಕೇರಳ, ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ಕೆಲವು ಕ್ರಮಕೈಗೊಂಡಿವೆ. ಕರ್ನಾಟಕ ಮಾತ್ರ ಈ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂಬುದು ಗಂಭೀರ ಆರೋಪ.

2006-07ರಿಂದ ಈವರೆಗೆ ಕಟ್ಟಡ ಮಾಲೀಕರಿಂದ ಸೆಸ್ (ಕರ) ರೂಪದಲ್ಲಿ 8,538 ಕೋಟಿ ನಿಧಿ ಸಂಗ್ರಹವಾಗಿದೆ. ಈ ಹಣವನ್ನು ಇಂಥ ಸಂದರ್ಭದಲ್ಲಿ ಬಳಸಿಕೊಳ್ಳಲು ಸರ್ಕಾರ ಮನಸ್ಸು ಮಾಡಬೇಕಿದೆ ಎಂದು ಕಟ್ಟಡ ಕಾರ್ವಿುಕರ ಸಂಘಟನೆ ಅಭಿಪ್ರಾಯಪಟ್ಟಿದೆ.

3 ಲಕ್ಷ ನೋಂದಾಯಿತ ಕಾರ್ವಿುಕರಿಗೆ ಸರ್ಕಾರವೇನು ತನ್ನ ಬೊಕ್ಕಸದಿಂದ ನೆರವು ನೀಡುವುದು ಬೇಡ, ಕರ ರೂಪದಲ್ಲಿ ಜನ ಕೊಟ್ಟ ಹಣ ಖಾತೆಯಲ್ಲಿದೆ. ಅದನ್ನು ಬಳಸಿಕೊಳ್ಳಲು ಒಂದು ಗಟ್ಟಿ ತೀರ್ಮಾನ ಮಾಡಿ ಕೆಲ ದಿನಗಳ ಮಟ್ಟಿಗಾದರೂ ವಿತರಿಸಿದರೆ ಅನುಕೂಲ ವಾಗುತ್ತದೆ ಎಂದು ಕಟ್ಟಡ ಕಾರ್ವಿುಕ ಅಯ್ಯಪ್ಪ ಹೇಳುತ್ತಾರೆ.

ಯುಪಿ ಸರ್ಕಾರದೊಂದಿಗೆ ಚರ್ಚೆ: ಕಾರ್ವಿುಕ ಇಲಾಖೆ ಹಿರಿಯ ಅಧಿಕಾರಿ ಹೇಳುವಂತೆ, ಕಾರ್ವಿುಕರಿಗೆ ಈ ತುರ್ತು ಸಂದರ್ಭದಲ್ಲಿ ಯಾವ ರೀತಿ ಅನುಕೂಲ ಮಾಡಿಕೊಡಬಹುದೆಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರದೊಂದಿಗೆ ಮಾತನಾಡಿ, ಅಲ್ಲಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇವೆ. ಸೋಮವಾರ ವಿವಿಧ ಟ್ರೇಡ್ ಯೂನಿಯನ್ ಜತೆ ಸಭೆ ನಡೆಸಿ ಒಂದು ತೀರ್ವನಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆ.

ಯೋಗಿ ಮಾಡಿದ್ದೇನು?:

ಕೈಗಾರಿಕೆ ಹಾಗೂ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡು ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ಕಾರ್ವಿುಕರು ದೈನಂದಿನ ಅಗತ್ಯತೆ ಗಳನ್ನು ಪೂರೈಸಿಕೊಳ್ಳಲು ಉತ್ತರಪ್ರದೇಶ ಸರ್ಕಾರ -ಠಿ; 1 ಸಾವಿರದ ನೆರವು ಘೋಷಿಸಿದೆ. 15 ಲಕ್ಷ ಕೂಲಿ ಕಾರ್ವಿುಕರು ಹಾಗೂ 20.23 ಲಕ್ಷ ಕಟ್ಟಣ ನಿರ್ಮಾಣ ಕಾರ್ವಿುಕರಿಗೆ ಇದರಿಂದ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net