

ಚಿತ್ರದುರ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಮೆಡಿಕಲ್, ಔಷಧ ಮಾಫಿಯಾಕ್ಕೆ ಮಣಿದಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಆರೋಪಿ ಸಿದ್ದಾರೆ.
ಮಂಗಳವಾರ ಲೋಕಸಭೆ ಶೂನ್ಯವೇಳೆಯಲ್ಲಿ ಕರ್ನಾಟಕದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸಾವು ಕುರಿತಂತೆ ಮಾತನಾ ಡಿ, ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದೆ. ಪ್ರಸಕ್ತ ಸಾಲಿನ ಬಜೆಟನ್‌ನಲ್ಲಿ ಅಂದಾಜು 90,659 ಕೋಟಿ ರೂ.ಅನುದಾನ ಹಂ ಚಿಕೆ ಮಾಡಿದೆ. ಆದರೆ ಕೆಲವು ರಾಜ್ಯಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಬರುವುದಕ್ಕೆ ಹಿಂದೇಟು ಹಾಕುವ ಂತಾಗಿದೆ ಎಂದರು.
ಇದಕ್ಕೆ ಪೂರಕವೆಂಬಂತೆ ಕರ್ನಾಟಕದಲ್ಲಿ ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ. ಕಳೆದ ನಾಲ್ಕೈದು ತಿಂಗಳಲ್ಲಿ 28ಕ್ಕೂ ಹೆಚ್ಚು ಬಾಣಂತಿಯರ ಸಾವುಗಳಾಗಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ ತಿಂಗಳೊಂದರಲ್ಲೇ ನಾಲ್ವರು ಅಸು ನೀಗಿದ್ದು, ದುರಂತಕ್ಕೆ ರಾಜ್ಯಸರ್ಕಾರದ ಘೋರ ನಿರ್ಲಕ್ಷ್ಯಮತ್ತು ಅದಕ್ಷತೆ ಕಾರಣವಾಗಿದೆ ಎದು ಆರೋಪಿಸಿದರು.
ನಾಗರಿಕರ ಸುರಕ್ಷತೆ ಖಾತ್ರಿಪಡಿಸುವ ಮೂಲ ಕರ್ತವ್ಯದಿಂದ ಫಲಾಯನ ಮಾಡಿರುವ ಈ ಸರ್ಕಾರ ಮೆಡಿಕಲ್ ಹಾಗೂ ಔಷಧ ಮಾ ಫಿಯಾಕ್ಕೆ ಮಣಿದಿದೆ. Intra-venous ದ್ರಾವಣದಿಂದ ಬಾಣಂತಿಯರ ಸಾವುಗಳಾಗಿವೆ ಎಂದು ಹೇಳಲಾಗಿದೆ. ಆದರೆ ಅದನ್ನು ಬಳಸದಂತೆ ಔಷಧ ನಿಯಂತ್ರಕರ ವರದಿ ಇದ್ದರೂ, ಆಸ್ಪತ್ರೆಗಳಿಗೆ ದ್ರಾವಣ ಸರಬರಾಜು ಆಗಿರುವುದು ಬಾಣಂತಿಯರ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳದ ಔಷಧ ಕಂಪನಿಯ ಈ ಔಷಧ ತರಲು ಅನುಮತಿ ನೀಡಿದ್ದು ಹೇಗೆ ಎನ್ನುವ ಸತ್ಯ ತಿಳಿಯಬೇಕಾಗಿದೆ. ಔಷಧ ಖ ರೀದಿ ಮೇಲೆ ಪ್ರಭಾವ ಬೀರುತ್ತಿರುವ ಮೆಡಿಕಲ್, ಔಷಧ ಮಾಫಿಯಾವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿ ರುವುದು ಆಘಾತಕಾರಿ ಸಂಗತಿಯಾಗಿದೆ. ಈ ಸಾವುಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದರು.
ಈ ದ್ರಾವಣ ರಾಜ್ಯದ ಎಷ್ಟು ಜಿಲ್ಲೆಗಳಿಗೆ ಸರಬರಾಜಾಗಿದೆ? ಅಲ್ಲಿ ಎಷ್ಟು ಸಾವುಗಳು ಸಂಭವಿಸಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ತನಿಖೆಯನ್ನು ಎಸ್‌ಐಟಿಗೆ ವಹಿಸಿರುವ ಕ್ರಮ ಸರಿಯಲ್ಲ. ತನಿಖೆ ಕುರಿತು ಮಧ್ಯಪ್ರವೇಶಿಸಿ ರಾಜ್ಯಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕೇಂದ್ರದ ಆರೋಗ್ಯ ಸಚಿವಾಲಯವನ್ನು ಕೋರಿದ್ದಾರೆ.