ಹಾವೇರಿ: ರೆಬೆಲ್ ಶಾಸಕ ನೆಹರು ಓಲೇಕಾರಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬುಲಾವ್.
ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ನಿನ್ನೆ ಪ್ರತಿಭಟನೆಯನ್ನೂ ಮಾಡಿದ್ದ ಓಲೇಕಾರ ಅವರನ್ನು ಸಮಾಧಾನಪಡಿಸಲು ಬಿಎಸ್ ವೈ ಬೆಂಗಳೂರಿಗೆ ಕರೆಸಿದ್ದಾರೆ.
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಸೇರುತ್ತಾರೆಂಬ ಮಾತುಗಳು ಕೇಳಿ ಬಂದಿರುವ ಬೆನ್ನಲ್ಲೇ ಬಿಎಸ್ ವೈ ಭೇಟಿಗೆ ತೆರಳಿರುವ ಓಲೇಕಾರ ಹಾಗೂ ಬೆಂಬಲಿಗರನ್ನು ಬಿಎಸ್‌ವೈ ಮನವೊಲಿಸುತ್ತಾರಾ ಎಂಬ ಕುತೂಹಲ ಮೂಡಿದೆ.