ಒಣಗಿದ ಮರ ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಬೇಸಿಗೆ ಮುಗಿದ ನಂತರ ಮಳೆಗಾಲ ಪ್ರಾರಂಭವಾಗುತ್ತದೆ. ಬೇಸಿಗೆಯಲ್ಲಿ ಅನೇಕ ಗಿಡಮರಗಳು ಒಣಗಿಹೋಗುತ್ತವೆ. ಮಳೆಗಾಲ ಪ್ರಾರಂಭವಾದ ನಂತರ ಬಿರುಗಾಳಿ ಮಳೆಗೆ ಮರಗಳು ಉರುಳಿ ಬೀಳುತ್ತವೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪ್ರದೇಶಗಳಲ್ಲಿ ಒಣಗಿದ ಮರಗಳನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದರೆ ಅದರಿಂದಾಗುವ ಅನಾಹುತಗಳು ತಪ್ಪುತ್ತವೆ.

ಕೋಲಾರ ನಗರದ ಜಯನಗರದ ೮ನೇ ಕ್ರಾಸ್‌ನ ೧ನೇ ಅಡ್ಡರಸ್ತೆಯ 'ಬಿ' ಬ್ಲಾಕ್ ಸಮೀಪ ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಮರವೊಂದು ಒಣಗಿಹೋಗಿದೆ. ಮರದ ಕೆಳಗಡೆ ವಿದ್ಯುತ್ ತಂತಿಗಳು ಹಾದುಹೋಗಿವೆ. ಹಾಗೂ ವಾಸದ ಮನೆಗಳು ಇರುವುದರಿಂದ ಮಳೆ, ಗಾಳಿಗೆ ಮರ ಉರುಳಿ ಬೀಳುವ ಸಾಧ್ಯತೆ ಇದೆ.

ಮರವನ್ನು ತೆರವುಗೊಳಿಸಲು ನಗರಸಭಾ ಸದಸ್ಯ ಮುರಳೀಗೌಡ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಮರವನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ.

ಜುಲೈ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಬಹುದು. ಈಗಲೇ ಮರ ತೆರವುಗೊಳಿಸದಿದ್ದಲ್ಲಿ ಬೇಸಿಗೆಯ ಬಿಸಿಲಿಗೆ ಮತ್ತಷ್ಟು ಮರ ಒಣಗಿ ಬೆಂಡಾಗಬಹುದು. ಮಳೆ ಪ್ರಾರಂಭಗೊAಡರೆ ಬಿರುಗಾಳಿ ಬೀಸಿದರೆ ಮರ ಉರುಳಿ ಬಿದ್ದರೆ ಮನೆಗಳಿಗೆ ಅಪಾಯ ಹಾಗೂ ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆಯು ಇದೆ.

ಚಿತ್ರ ೦೪ ಕೆ.ಎಲ್.ಆರ್. ೦೩ : ಜಯನಗರದ ರಸ್ತೆಯ ಪಕ್ಕದಲ್ಲಿ ಮರ ಒಣಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net