ಒಂದೇ ದಿನ ಎರಡು ಪರೀಕ್ಷೆ

dc-Cover-id2u8nf765f7dfoqr1i2ep6bf5-20160307101014.Medi
Published on

ಬೆಂಗಳೂರು
ಶಿಕ್ಷಕರ ಅರ್ಹತಾ(ಟಿಇಟಿ) ಪರೀಕ್ಷೆ ಮತ್ತು ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಡೆಸುವ ಪದವಿ ಪರೀಕ್ಷೆ ಎರಡು ಒಂದೇ ದಿನ ಬಿದ್ದಿದೆ. ಅ.4ರಂದು ಎರಡು ಪರೀಕ್ಷೆಗಳು ನಡೆಯಲಿದ್ದು, ಎರಡು ಪರೀಕ್ಷೆಯನ್ನು ತೆಗೆದುಕೊಂಡಿರುವ ಅಭ್ಯರ್ಥಿಗಳಿಗೆ ಆತಂಕ ತಂದಿದೆ.
ಈಗಾಗಲೇ ಟಿಇಟಿ ಪರೀಕ್ಷೆಯನ್ನು ಮೂರು ಬಾರಿ ಮುಂದೂಡಿದೆ. ಆದರೂ, ವಿವಿಯು ಇದರ ವೇಳಾಪಟ್ಟಿ ನೋಡದೇ ಪರೀಕ್ಷೆ ನಿಗದಿ ಮಾಡಿದೆ. ಈ ಬಗ್ಗೆ ವಿವಿಗೆ ವಿದ್ಯಾರ್ಥಿಗಳು ಮನವರಿಕೆ ಮಾಡಿದರೂ, ಪರೀಕ್ಷೆ ವೇಳಾಪಟ್ಟಿ ಬದಲು ಮಾಡಲು ಸಾಧ್ಯವಿಲ್ಲವೆಂದು ಹೇಳಿ ಕಳುಹಿಸಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಮುಕ್ತ ವಿವಿ ಇಲ್ಲವೇ ಟಿಇಟಿ ಅಯೋಜನೆ ಮಾಡುವ ಸಾರ್ವಜನಿಕ ಶಿಕ್ಷಣ ಇಲಾಖೆ ಇಬ್ಬರಲ್ಲಿ ಒಬ್ಬರು ಪರೀಕ್ಷೆ ದಿನಾಂಕವನ್ನು ಬದಲು ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net