ಒಂದು ಜಾತಿ ಮತದಿಂದ ಚುನಾವಣೆ ಗೆಲುವು ಅಸಾಧ್ಯ ಡಿ.ಕೆ. ಶಿವಕುಮಾರ್‌ಗೆ ಮಾಜಿ ಪ್ರಧಾನಿ ದೇವೇಗೌಡ ತಿರುಗೇಟು

Published on

ನಮ್ಮದು ಕುಟುಂಬ ಪಕ್ಷವಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ನಮ್ಮದು ಬಡವರು, ರೈತರು, ಅತ್ಯಂತ ಕೆಳ ವರ್ಗದ ಪರವಾದ ಪಕ್ಷ. ಈಗಿನ ಸರ್ಕಾರ ಬಡವರ ಪರ, ರೈತ ಪರ ಇಲ್ಲ ಎಂದು ಗುಡುಗಿದರು.

ದೇಶದಲ್ಲಿ ಮುಸ್ಲಿಂ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ನಮ್ಮ ಸರ್ಕಾರ. ನನ್ನ ಹೆಸರಲ್ಲಿ ಗೌಡ ಎಂಬ ಪದ ಸೇರಿಕೊಂಡಿದೆ. ಹಾಗೆಂದು ನಿಂದನೆ ಮಾಡೋದು ಸರಿಯೆ? ನಿಂದನೆ ಮಾಡಿದವರು ಅನುಭವಿಸುತ್ತಾರೆ. ಅವರು ಚುನಾವಣೆಯಲ್ಲಿ ಗೆಲ್ಲಲು ಯಾವ ಪ್ರಯೋಗ ಮಾಡುತ್ತಾರೆಯೋ ಮಾಡಲಿ. ಅದಕ್ಕೆ ಅವರು ಸ್ವತಂತ್ರರು ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು.

ನಮ್ಮ ಪಕ್ಷವನ್ನು ಯಾರಾದರೂ ಒಡೆಯುತ್ತಾರೆ ಎಂದರೆ ಅದು ಅವರ ಭ್ರಮೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷವನ್ನು ಒಡೆಯಲು ಸಾಧ್ಯವಿಲ್ಲ. ನಮ್ಮ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಆರ್.ಆರ್. ನಗರದಲ್ಲಿ ಡಿಕೆ ಶಿವಕುಮಾರ್ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೇವೇಗೌಡರು, ನನಗೂ ಸಾಕಷ್ಟು ಅನುಭವ ಇದೆ. ಆದರೆ, ನಾನು ಮಾತನಾಡುವುದಿಲ್ಲ. ಅವರು ಏನೇ ಹೇಳಲಿ, ಅಂತಿಮವಾಗಿ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ಜೆ.ಪಿ. ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಎಷ್ಟೇ ಪ್ರಭಾವಿಯಾಗಿದ್ದರೂ ಒಂದು ಜಾತಿ ಮತದಿಂದ ಯಾರೂ ಚುನಾವನೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಯಾರೇ ಬಂದರೂ ಜೆಡಿಎಸ್ ತುಳಿಯಲು ಆಗುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ. ಕೆಲವರು ಹೀಗೆ ಬಂದು ಹಾಗೆ ಹೋಗಿರೋದನ್ನು ನೋಡಿದ್ದೇವೆ. ಅದೊಂದು ಹಿಂಸೆ. ನಮಗೆ ಆಯಾ ರಾಮ್ ಗಯಾ ರಾಮ್ ರೀತಿಯವರು ಬೇಕಾಗಿಲ್ಲ. ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಈ ಬಾರಿ ಟಿಕೆಟ್ ಕೊಡುತ್ತೇವೆ. ಬುಧವಾರ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net