

ಸಾಮೂಹಿಕ ಅತ್ಯಾಚಾರ ನಡೆಸಿ ಮಹಿಳೆ ಸಾವಿಗೆ ಕಾರಣರಾದ ಐವರು ಅಪರಾಧಿಗಳಿಗೆ ಮೈಸೂರಿನ ಏಳನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಾಂತಿ ನಗರದ ರಫೀಕ್ ಅಹಮ್ಮದ್(26), ಮಂಡಿ ಮೊಹಲ್ಲಾದ ಮಂಜ(25), ಲಷ್ಕರ್ ಮೊಹಲ್ಲಾದ ಮನು(23), ಕೃಷ್ಣ(40) ರೇವಣ್ಣ(27) ಶಿಕ್ಷೆಗೆ ಗುರಿಯಾದವರು.
ಏನಿದು ಪ್ರಕರಣ?: ನಾಲ್ಕು ವರ್ಷಗಳ ಹಿಂದೆ ರಫೀಕ್ ಅಹಮ್ಮದ್ ಅಪರಿಚಿತ ಮಹಿಳೆಯೊಂದಿಗೆ ಬಿ.ಎನ್. ಸ್ಟ್ರೀಟ್ ಬಳಿ ದೈಹಿಕ ಸಂಪರ್ಕ ನಡೆಸಿ ಬಳಿಕ ಮತ್ತೊಂದು ಕಡೆ ಕರೆದುಕೊಂಡು ಹೋಗಿದ್ದ. ಈ ವೇಳೆ ಅಲ್ಲಿದ್ದ ಮಂಜ, ಮನು, ಕೃಷ್ಣ ಕೂಡ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ರೇವಣ್ಣ ಸಹಕಾರ ನೀಡಿದ್ದ. ಈ ಸಂದರ್ಭದಲ್ಲಿ ಆಕೆ ಉಸಿರುಗಟ್ಟಿ ಮೃತಪಟ್ಟಿದ್ದಳು.
ಪ್ರಕರಣ ದಾಖಲಿಸಿಕೊಂಡ ಲಷ್ಕರ್ ಠಾಣೆ ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ರಮೇಶ ಅವರು 20 ವರ್ಷ ಶಿಕ್ಷೆಯೊಂದಿಗೆ ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ನಾಗರಾಜ ವಾದ ಮಂಡಿಸಿದ್ದರು.