ಐದು ಸಂರಕ್ಷಿತ ಸ್ಮಾರಕಕ್ಕೆ ಪ್ರಕ್ರಿಯೆ

VidhanaSoudha
Published on

ಬೆಂಗಳೂರು: ರಾಜ್ಯದ ಐದು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿತ ಸ್ಮಾರಕವನ್ನಾಗಿ ೋಷಿಸಲು ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.

‘ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳ ಮತ್ತು ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳು ಅಧಿನಿಯಮ 1961’ರ ಅನ್ವಯ ರಾಜ್ಯ ಸಂರಕ್ಷಿತ ಸ್ಮಾರಕವನ್ನಾಗಿ ೋಷಿಸಲು ನಿರ್ಧರಿಸಲಾಗಿದೆ. ಈ ಆದೇಶದಿಂದ ಬಾಧಿತರಾದವರಿಂದ 60 ದಿನಗಳ ಅವಧಿಯಲ್ಲಿ ಆಕ್ಷೇಪಣೆ ಆಹ್ವಾನಿಸಿದೆ. ಸರ್ಕಾರ ಆಕ್ಷೇಪಣೆಗಳನ್ನು ಪರಿಶೀಲಿಸಲಿದೆ.

ಎಲ್ಲಿವೆ ಸ್ಥಳ?

1. ಹೊಸಕೋಟೆ ತಾಲೂಕು ದೊಡ್ಡ ಹುಲ್ಲೂರು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯ (ಸರ್ಕಾರಿ ಕೆರೆ ಅಂಗಳ)

2. ದೇವನಹಳ್ಳಿ ತಾಲೂಕು ನಲ್ಲೂರು ಗ್ರಾಮದ ಶ್ರೀ ಚನ್ನಕೇಶವ ದೇವಾಲಯ

3. ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಸಬಾ ಹೋಬಳಿಯ ಖಾಸ್ಟಗ್ ಗ್ರಾಮದ ಶ್ರೀ ಮಹದೇಶ್ವರ ದೇವಾಲಯ (ಖಾಸಗಿ ಒಡೆತನದಲ್ಲಿದೆ)

4. ದೊಡ್ಡ ಬಳ್ಳಾಪುರ ತಾಲೂಕು ತಿಪ್ಪೂರು  ಗ್ರಾಮದ ಗಂಗರ ಶೈಲಿಯ ವೀರಗಲ್ಲಿ (ಖಾಸಗಿ- ಕೆರೆ ಅಂಗಳ)

5. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿರುವ ಶಿವಶರಣೆ ಅಕ್ಕ ನಾಗಮ್ಮನವರ ಸಮಾಧಿ (ಈಶ್ವರ ಲಿಂಗ ಮತ್ತು ನಂದಿ ಪ್ರತಿಮೆ). ಈ ಸ್ಮಾರಕ ಖಾಸಗಿ ಒಡೆತನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net