ಐದು ಪಿಯು ಕಾಲೇಜಿಗೆ ಅನುಮತಿ

Published on

ಕುಡಚಿ, ಬೆಳಗಾವಿ: ಕುಡಚಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ 5 ಸರ್ಕಾರಿ ಪಿಯು ಕಾಲೇಜುಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸ್ಥಾಪಿಸಲಾಗುತ್ತದೆ ಎಂದು ಪಿ.ರಾಜೀವ್ ಹೇಳಿದರು.

ಹಾರೂಗೇರಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 3.99 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಾರ್ಡ್‌ಗಳ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಳಚೆ ನಿರ್ಮೂಲನೆ ಯೋಜನೆ ಅಡಿಯಲ್ಲಿ 580 ಮನೆಗಳ ಕಟ್ಟಡ ಪ್ರಾರಂಭವಾಗಿವೆ. ಮುಖ್ಯಮಂತ್ರಿಗಳ ಸಹಕಾರದಿಂದ ಕುಡಚಿ ಮತಕ್ಷೇತ್ರದಲ್ಲಿ 5 ಸರ್ಕಾರಿ ಪಿಯು ಕಾಲೇಜು ಸ್ಥಾಪನೆಗೆ ಅನುಮತಿ ದೊರೆತ್ತಿದ್ದು , ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಬಸನಗೌಡ ಆಸಂಗಿ, ರವಿ ಠಕ್ಕನವರ, ಸಂತೋಷ ಸಿಂಗಾಡಿ, ಬಸವರಾಜ ಖೋತ, ಈರನಗೌಡ ಪಾಟೀಲ, ವಿನಾಯಕ ಮುಡಶಿ, ಶಿವಾನಂದ ದಳವಾಯಿ,
ಪರಗೌಡ ಉಮರಾಣಿ, ರಾಜು ಅರಳಿಕಟ್ಟಿ, ವಸಂತ ಲಾಲಿ, ಪುರಸಭೆ ಮುಖ್ಯಾಧಿಕಾರಿ ಜೆ.ವಿ. ಅಣ್ಣಿಗೇರಿ, ಗುತ್ತಿಗೆದಾರ ಸದಾಶಿವ ದಳವಾಯಿ, ಪಿಎಸ್‌ಐ
ಆರ್. ಕೊಂಗನಳ್ಳಿ, ಹವಾಲ್ದಾರ ಕುಮಾರ ಪವಾರ, ಪಿ.ಸಿ ಶಾಂಡಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net