

ಚಿತ್ರದುರ್ಗ: ಇಂಡೋ ಟಿಬೆಟಿಯನ್ ಫ್ರೆಂಡ್‌ಶಿಪ್ ಸೊಸೈಟಿ (ಐಟಿಎಫ್‌ಎಸ್) ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗದಲ್ಲಿ ಆ. 10ರಂದು ಟಿಬೆಟಿಯನ್ ಬೌದ್ಧ ಧರ್ಮಗುರು ದಲೈ ಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ನಡೆಯಲಿರುವ ‘ಥ್ಯಾಂಕ್ ಯು ಭಾರತ’, ‘ಥ್ಯಾಂಕ್ ಯು ಕರ್ನಾಟಕ’ ಕಾರ್ಯಕ್ರಮದಲ್ಲಿ 500 ಮಂದಿ ಬೌದ್ಧ ಬಿಕ್ಷುಗಳು ಪಾಲ್ಗೊಳ್ಳಲಿದ್ದು, ಅಂದು ಅಧಿಕೃತವಾಗಿ ಪತ್ರ ನೀಡುವ ಮೂಲಕ ಘೋಷಣೆಯಾಗಲಿದೆ. ಅಲ್ಲದೆ, ಧರ್ಮ ಶಾಲಾದಿಂದ ಜಿಗ್ಮೆ ಜಗ್ನೆ ಲಾಮಾ, ಸಾರ್ಕ್ ರಾಷ್ಟ್ರಗಳ ಪ್ರತಿನಿಧಿ ಜಿಗ್ಮೆ ಚುಂಗ್ ಭಾಗವಹಿಸಲಿದ್ದಾರೆ.