

ಆನಂದಪುರ: ಐಗಿನಬೈಲಿನ ವೆಟ್ ನರ್ಸರಿ ಸಮೀಪ ಶನಿವಾರ ರಾತ್ರಿ ತೆಂಗಿನಕಾಯಿ ಚಿಪ್ಪು ತುಂಬಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಹೊನ್ನಾವರದಿಂದ ಬೆಂಗಳೂರಿಗೆ ತೆಂಗಿನಕಾಯಿ ಚಿಪ್ಪು ಸಾಗಿಸಲಾಗುತ್ತಿತ್ತು. ಐಗಿನಬೈಲಿನ ಇಳಿಜಾರಿನಲ್ಲಿ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಚರಂಡಿಗೆ ಉರುಳಿ ಬಿದ್ದಿದೆ. ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಸ್ಥಳದಲ್ಲಿ 8 ತಿಂಗಳ ಹಿಂದೆ ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿಯಾಗಿ ಬಿದ್ದಿತ್ತು.