ಐಎಂಐ ಅಭಿಯಾನ ಯಶಸ್ಸಿಗೆ ಕೈಜೋಡಿಸಿ : ಡಾ.ಅಲೀಮ್ ಪಾಷಾ ಸಲಹೆ

28 SARAG 3
Published on


ಮೈಸೂರು : ಹಾಡಿ ಮತ್ತು ಗ್ರಾಮಗಳನ್ನು ರೋಗಗಳಿಂದ ದೂರವಿಡಬೇಕು ಎಂದು ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಅಲೀಮ್ ಪಾಷಾ ತಿಳಿಸಿದರು.

ಸರಗೂರು ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಐಎಂಐ 5.0 ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ (ಐಎಂಐ) 5.0 ಅಭಿಯಾನವು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಆ.7 ರಿಂದ 12, ಸೆ.11 ರಿಂದ 16 ಮತ್ತು ಅ. 9 ರಿಂದ 14ರ ವರಗೆ ಲಸಿಕೆ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕೈಜೋಡಿಸಿ ಮಕ್ಕಳಿಗೆ ಲಸಿಕೆ ಹಾಕಿಸಲು ಸಹಕರಿಸಬೇಕು. ಹಾಡಿ ಮತ್ತು ಗ್ರಾಮೀಣದ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಆಶಾ ಕಾರ್ಯಕರ್ತರಿಗೆ ಸಲಹೆ ನೀಡಿದರು.


ಈ ಲಸಿಕೆಯು ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ವ್ಯಾಪ್ತಿಯ ಉಪಕೇಂದ್ರ ಹಾಗೂ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮಗುವಿನ ದಾಖಲೆ ಪಡೆದು ಲಸಿಕೆ ಹಾಕಿಸಿ ಪ್ರಮಾಣ ಪತ್ರ ಕೊಡಿಸಬೇಕು ಎಂದು ಸಲಹೆ ನೀಡಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ರಜನಿ, ಆಶಾ ಕಾರ್ಯಕರ್ತರಾದ ನಾಗಮ್ಮ, ಚೆಲುವಾಂಬ, ನಾಗಮ್ಮ, ಜ್ಯೋತಿ, ಜಯಶೀಲ, ರೂಪಾ, ಮಹದೇವಮ್ಮ, ಮಹಾದೇವಸ್ವಾಮಿ, ದೊಡ್ಡಬರಗಿ ಶಾರದಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net