ಏಪ್ರಿಲ್ 15 ರಿಂದ ಮೇ 14 ರ ವರೆಗೆ ಪುಸ್ತಕ ದಾಸ್ತಾನು ಪರಿಶೀಲನೆ

Book
Published on

ಮೈಸೂರು: ಮೈಸೂರು ನಗರ ಕೇಂದ್ರ ಗಂಥಾಲಯ ಕಚೇರಿಯ ಅಧೀನಶಾಖಾ/ಸೇವಾ ಕೇಂದ್ರ ಗ್ರಂಥಾಲಯಗಳಲ್ಲಿ ಏಪ್ರಿಲ್ 15 ರಿಂದ ಮೇ 14 ರ ವರೆಗೆ ಪುಸ್ತಕ ದಾಸ್ತಾನು ಪರಿಶೀಲನೆಯ ಕಾರ್ಯವನ್ನು ಕೈಗೊಳ್ಳಲಾಗಿರುವ ಕಾರಣ ಸದರಿ ದಿನಾಂಕಗಳoದು ಸಾರ್ವಜನಿಕರಿಗೆ ಗ್ರಂಥಾಲಯದ ಎರವಲು ಸೇವೆಯನ್ನು ಒದಗಿಸಲಾಗುವುದಿಲ್ಲ ಬದಲಾಗಿ ಎರವಲು ಪಡೆದ ಪುಸ್ತಕಗಳನ್ನು ಹಿಂದಿರುಗಿಸಲು ಅವಕಾಶವಿರುತ್ತದೆ. ಕಾರಣ ಸಾರ್ವಜನಿಕರು ಎರವಲು ಪಡೆದ ಪುಸ್ತಕಗಳನ್ನು ಹಿಂದಿರುಗಿಸಲು ಕೋರಲಾಗಿದೆ ಎಂದು ಮೈಸೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಮಂಜುನಾಥ್ ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net